ರಾಯಚೂರು: ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಇಂದು ಚುನಾವಣಾಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಇಂದು ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ ಬರೋಬ್ಬರಿ 32.42 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
ರಾಯಚೂರು ಗಡಿಭಾಗ, ಗ್ರಾಮಾಂತರ, ಮಾನ್ವಿ ಹಾಗೂ ದೇವದುರ್ಗ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆಯ ವೇಳೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದಂತ 32,42,627 ಹಣವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಮೂಲಕ ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ.
ಕಲಬುರ್ಗಿಯ ಹಳೆ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಅಗ್ನಿ ಅವಘಡ: ಹಳೇ ದಾಖಲೆಗಳು ಬೆಂಕಿಗಾಹುತಿ
ಕಲಬುರ್ಗಿ: ನಗರದಲ್ಲಿದ್ದಂತ ಹಳೆಯ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಇಂದು ಅಗ್ನಿ ಅವಘಡ ಉಂಟಾಗಿದೆ. ಆಕಸ್ಮಿಕವಾಗಿ ತಗುಲಿದಂತ ಬೆಂಕಿಯಿಂದಾಗಿ ಹಳೆಯ ಕಟ್ಟಡದಲ್ಲಿದ್ದಂತ ದಾಖಲೆಗಳು ಬೆಂಕಿಗೆ ಆಹುತಿಯಾಗಿರೋದಾಗಿ ತಿಳಿದು ಬಂದಿದೆ.
ಕಲಬುರ್ಗಿ ನಗರದ ಜಗತ್ ವೃತ್ತದ ಹಳೆಯ ಪಾಲಿಕೆ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಉಂಟಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದಂತ ಬೆಂಕಿಯಿಂದಾಗಿ ಹಳೆಯ ಕಟ್ಟಡದಲ್ಲಿದ್ದಂತ ಹಳೆಯ ದಾಖಲೆಗಳು ಬೆಂಕಿಯಿಂದ ಹೊತ್ತಿ ಉರಿದಿರೋದಾಗಿ ತಿಳಿದು ಬಂದಿದೆ.
ಕಲಬುರ್ಗಿ ಮಹಾನಗರ ಪಾಲಿಕೆಯ ಹಳೆಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವಂತ ವಿಷಯವನ್ನು ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವಂತ ಅಗ್ನಿಶಾಮಕ ಅಧಿಕಾರಿಗಳು ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ.
‘ಕಾಂಗ್ರೆಸ್ ಪಕ್ಷದ ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದವರಿಗೆ ಯಾರಿಗೆ ನೀಡಿದರೂ ಒಟ್ಟಾಗಿ ಕೆಲಸ – ಡಾ.ಯೋಗೀಶ್ ಬಾಬು