ಬೆಂಗಳೂರು : ಬಿಬಿಎಂಪಿ ( BBMP ) ಮೀಸಲಾತಿ ಪಟ್ಟಿಯ ಬಗ್ಗೆ ವಿರೋಧವನ್ನು ಕಾಂಗ್ರೆಸ್ ( Congress ) ನ್ಯಾಯಾಲಯದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶವಿದೆ. ಇದನ್ನು ಬಿಟ್ಟು ರೌಡಿಸಂ ಮಾಡಿ ವಿಕಾಸಸೌಧಕ್ಕೆ ನುಗ್ಗಿರುವುದು ಎಷ್ಟು ಸರಿ. ಕಾಂಗ್ರೆಸ್ ಸಂಸ್ಕೃತಿಯನ್ನು ಇದು ತೋರಿಸುತ್ತದೆ. ಇದನ್ನು ಎಲ್ಲರೂ ಖಂಡಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು.

BIG NEWS: ರಾಜ್ಯದಲ್ಲಿ 34,432.46 ಕೋಟಿ ರೂ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ: 48,850 ಜನರಿಗೆ ಉದ್ಯೋಗಾವಕಾಶ ಸೃಷ್ಟಿ

ಇಂದು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಇವರ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಆಯೋಜಿಸಿರುವ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‍ನ ಸೆಂಟರ್ ಆಫ್ ಎಕ್ಸಲೆನ್ಸ್ ಬಿಲ್ಡಿಂಗ್ ನ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಮೀಸಲಾತಿ ಪಟ್ಟಿಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಇಂದು ವಿಕಾಸಸೌಧದಲ್ಲಿ ಪ್ರತಿಭಟನೆ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿ ಮೀಸಲಾತಿಯನ್ನು 2015 ರ ಉಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ನಿಯಮಗಳನ್ನು ಅನುಸರಿಸಿ ಮಾಡಲಾಗಿದೆ. ಕಾಂಗ್ರೆಸ್ ಸಹ ಹಿಂದೆ ಇದನ್ನು ಮಾಡಿದ್ದಾಗ ಏನಾಗಿತ್ತು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಎಲ್ಲಾ ಶಾಸಕರ ಕ್ಷೇತ್ರದಲ್ಲಿ ಏನಾಗಿತ್ತು ಎನ್ನುವುದು ಗೊತ್ತೇ ಇದೆ ಎಂದರು.

‘ನಮ್ಮ ಕ್ಲಿನಿಕ್‌’ಗೆ ಲೋಗೊ ಡಿಸೈನ್‌ ಮಾಡಿ ‘ಪ್ರಶಸ್ತಿ ಗೆಲ್ಲಿ’

Share.
Exit mobile version