ಸುಭಾಷಿತ :

Tuesday, February 18 , 2020 1:54 PM

ರೋಸ್ ವಾಟರ್ ಬಳಸಿ ಅಂದದ ಚಂದದ ತ್ವಚೆಯ ಒಡತಿ ನೀವಾಗಿ


Friday, February 14th, 2020 1:54 pm

ಸ್ಪೆಷಲ್ ಡೆಸ್ಕ್ : ರೋಸ್ ವಾಟರ್ ಅಥವಾ ಗುಲಾಬಿ ಜಲವನ್ನು ಇಂದು ನಿನ್ನೆಯಿಂದಲ್ಲ, ಹಲವಾರು ವರ್ಷಗಳಿಂದ ತ್ವಚೆಯ ಸೌಂದರ್ಯ ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ, ನೀವೇ ನೋಡಿ..

ಸ್ನಾನ ಮಾಡುವಾಗ ಕೆಲವೊಂದು ಹನಿಗಳಷ್ಟು ರೋಸ್ ವಾಟರ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿ ಬಿಸಿ ಮಾಡಿ. ಇದರಿಂದ ತನು -ಮನ ಎರಡೂ ಸಹ ಶಾಂತವಾಗುತ್ತದೆ.
ಪ್ರತಿ ದಿನ ರೋಸ್ ವಾಟರ್ ಹಚ್ಚುವುದರಿಂದ ಚರ್ಮದ ಸಣ್ಣ ಸಣ್ಣ ರಂದ್ರಗಳು ತೆರೆಯಲ್ಪಡುತ್ತವೆ . ಬೆವರಿನ ದುರ್ಗಂಧ ಹೊರಹಾಕಲು ಇವು ಅತ್ಯಂತ ಸಹಕಾರಿ.
ಮೊಸರಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಮುಖದ ಮೇಲೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ಮುಖ ಫ್ರೆಶ್ ಆಗುತ್ತದೆ.
ಒಣ ಚರ್ಮ ಹೊಂದಿದ್ದರೆ, ಹತ್ತಿಯಲ್ಲಿ ರೋಸ್ ವಾಟರ್ ಅದ್ದಿ, ಮುಖಕ್ಕೆ ಸಂಪೂರ್ಣವಾಗಿ ಹಚ್ಚಬೇಕು ಇದರಿಂದ ಮುಖ ಫ್ರೆಷ್ ಎನಿಸುತ್ತದೆ.
ರೋಸ್ ವಾಟರ್ ಮತ್ತು ನಿಂಬೆ ಹಣ್ಣಿನ ರಸವನ್ನು ಬೆರೆಸಿ, ಮೊಡವೆ ಇರುವ ಜಾಗಕ್ಕೆ ಹಚ್ಚಿ ಅದನ್ನು 20 ನಿಮಿಷದ ನಂತರ ತೊಳೆಯಬೇಕು. ಇದರಿಂದ ಮೊಡವೆ ನಿವಾರಣೆಯಾಗುತ್ತದೆ.
ರೋಸ್ ವಾಟರ್‌ನೊಂದಿಗೆ ಸ್ವಲ್ಪ ಗ್ಲಿಸರಿನ್ ಅನ್ನು ಬೆರೆಸಿಕೊಂಡು ಮುಖಕ್ಕೆ ಲೇಪಿಸಿ ನಯವಾಗಿ ಮಸಾಜ್ ಮಾಡಿದರೆ ಹೊಳೆಯುವ ಕಾಂತಿಯುಕ್ತ ತ್ವಚೆ ನಿಮ್ಮದಾಗುತ್ತದೆ.
ರೋಸ್ ವಾಟರ್‌‌ನಲ್ಲಿ ಅದ್ದಿ 10 ನಿಮಿಷಗಳ ಕಾಲ ಹತ್ತಿಯನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದರಿಂದ ಡಾರ್ಕ್​ ಸರ್ಕಲ್ ಕಡಿಮೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions