ಶೀಘ್ರದಲ್ಲೇ ಜೋಗ್ ಫಾಲ್ಸ್‌ನಲ್ಲಿ ‘ರೋಪ್ ವೇ – ಕೇಬಲ್ ಕಾರ್’ ಸಂಚಾರ: ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ನೇತೃತ್ವದಲ್ಲಿ ಸರ್ವೆ ಚುರುಕು

ಶಿವಮೊಗ್ಗ: ವಿಶ್ವವಿಖ್ಯಾತ ಜೋಗ್ ಫಾಲ್ಸ್‌ನಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು ಉದ್ದೇಶಿಸಲಾಗಿರುವ ಬಹುನಿರೀಕ್ಷಿತ ‘ರೋಪ್ ವೇ – ಕೇಬಲ್ ಕಾರ್’ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಗರ ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಹಾಗೂ ಸರ್ವೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ. ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದಾಗಿರುವ ಹಾಗೂ ಸಾಗರ ತಾಲೂಕಿನ ಪ್ರಮುಖ ಆಕರ್ಷಣೆಯಾಗಿರುವ ಜೋಗ್ ಫಾಲ್ಸ್ ಅನ್ನು ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಅದರ ಮುಂದುವರಿದ ಭಾಗವಾಗಿ, ಪ್ರವಾಸಿಗರಿಗೆ ಜೋಗ್ … Continue reading ಶೀಘ್ರದಲ್ಲೇ ಜೋಗ್ ಫಾಲ್ಸ್‌ನಲ್ಲಿ ‘ರೋಪ್ ವೇ – ಕೇಬಲ್ ಕಾರ್’ ಸಂಚಾರ: ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ನೇತೃತ್ವದಲ್ಲಿ ಸರ್ವೆ ಚುರುಕು