ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಮೆಲ್ಬೋರ್ನ್ನಲ್ಲಿ ನಡೆಯುತ್ತಿದೆ. ಸೂಪರ್ -12 ಹಂತದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿವೆ ಈ ನಡುವೆ ಟೀಮ್‌ ಇಂಡಿಯಾದ ಕಪ್ತಾನ ರೋಹಿತ್ ಶರ್ಮಾಗೆ ಇದು ಸ್ಮರಣೀಯ ಕ್ಷಣವಾಗಿದೆ. ಹೌದು, ಇಂದು ರೋಹಿತ್ ಶರ್ಮಾ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ, ಈ ಸಮಯದಲ್ಲಿ ಅವರು ಸಹ ಭಾವುಕರಾದ ಸನ್ನಿವೇಶ ಕಂಡು ಬಂದಿದೆ.

ಪಂದ್ಯಕ್ಕೂ ಮುನ್ನ, ಎರಡೂ ತಂಡಗಳು ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾಗ, ಆಟಗಾರರು ಮೆಲ್ಬೋರ್ನ್ನಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಮುಂದೆ ನಿಂತಿದ್ದರು. ಭಾರತದ ರಾಷ್ಟ್ರಗೀತೆ ಬಂದಾಗ, ಟೀಮ್ ಇಂಡಿಯಾದ ಎಲ್ಲಾ ಆಟಗಾರರು ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು, ಅದು ಮುಗಿಯುವ ಹಂತದಲ್ಲಿದ್ದಂತೆಯೇ, ರೋಹಿತ್ ಶರ್ಮಾ ಭಾವುಕರಾದರು ಮತ್ತು ತಮ್ಮನ್ನು ತಾವು ನಿಭಾಯಿಸಿಕೊಳ್ಳುವುದು ಕಂಡುಬಂದಿತು.

Share.
Exit mobile version