ಸುಭಾಷಿತ :

Tuesday, February 18 , 2020 1:47 PM

ರಾಜ್ ಕಪೂರ್ ಹಿರಿಯ ಪುತ್ರಿ ರಿತು ನಂದಾ ನಿಧನ


Wednesday, January 15th, 2020 10:17 am

ನವದೆಹಲಿ: ಬಾಲಿವುಡ್ ಚಿತ್ರರಂಗದ ಹಿರಿಯ ನಟ ದಿವಂಗತ ರಾಜ್ ಕುಪೂರ್ ಅವರ ಹಿರಿಯ ಪುತ್ರಿ ಹಾಗೂ ನಟ ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದ ಅವರ ಅತ್ತೆ ರಿತು ನಂದಾ ಮಂಗಳವಾರ ನಿಧನರಾಗಿದ್ದಾರೆ.

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ 71 ವರ್ಷ ವಯಸ್ಸಾಗಿತ್ತು. ಈ ವಿಷಯವನ್ನು ನೀತು ಕಪೂರ್ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಉದ್ಯಮಿ ರಾಜನ್ ನಂದಾ ಅವರ ಪತ್ನಿಯಾಗಿದ್ದ ರಿತು ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪುತ್ರ ನಿಖಿಲ್ ನಂದ ಅವರನ್ನು ಶ್ವೇತಾ ವಿವಾಹವಾಗಿದ್ದರು.

ರಿತು ನಂದಾ ನಟರಾದ ರಿಷಿ ಕಪೂರ್, ರಣಧೀರ್ ಕಪೂರ್ ಮತ್ತು ರಾಜೀವ್ ಕಪೂರ್ ಅವರ ಸಹೋದರಿ ಮತ್ತು ಸೂಪರ್ ಸ್ಟಾರ್ ರಾಜ್ ಕಪೂರ್ ಅವರ ಪುತ್ರಿಯಾಗಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions