ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (16535) ರೈಲಿನ ವೇಳಾಪಟ್ಟಿ ಪರಿಷ್ಕರಣೆಯನ್ನು ಮಾಡಲಾಗಿದೆ.  

ಈ ಬಗ್ಗೆ ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (16535) ರೈಲಿನ ವೇಳಾಪಟ್ಟಿ ಪರಿಷ್ಕರಣೆಯಿಂದಾಗಿ, ರೈಲು ಸಂಖ್ಯೆ 16549 ಕೆಎಸ್‌ಆರ್ ಬೆಂಗಳೂರು-ಕೋಲಾರ ಡೆಮು ಮತ್ತು ರೈಲು ಸಂಖ್ಯೆ 06532 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಜುಲೈ 2, 2024 ರಿಂದ ಪರಿಷ್ಕರಣೆ ಮಾಡಲಾಗುತ್ತಿದೆ ಎಂದಿದೆ.

ಈ ರೈಲುಗಳ ಪರಿಷ್ಕೃತ ಸಮಯಗಳಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿದುಕೊಳ್ಳಬಹುದು: https://swr.indianrailways.gov.in/view_detail.jsp?lang=0&dcd=7598&id=0,4,268

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಧಿಕೃತ ವೆಬ್‌ಸೈಟ್‌: www.enquiry.indianrail.gov.in ಭೇಟಿ ನೀಡಿ ಅಥವಾ 139 ಸಹಾಯವಾಣಿಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹದು.

ಸುಗಮ ಮತ್ತು ತೊಂದರೆರಹಿತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಬೇಕು ಅಂತ ತಿಳಿಸಿದೆ.

ಬೆಂಗಳೂರಲ್ಲಿ ‘HIV’ ಸೊಂಕಿತನ ಮೇಲೆ ‘ಸಲಿಂಗಕಾಮಿ’ಯಿಂದ ಅತ್ಯಾಚಾರ : ಮನೆಯಲ್ಲಿದ್ದ ನಗದು ದೋಚಿ ಪರಾರಿ

ಬೆಂಗಳೂರಲ್ಲಿ ‘HIV’ ಸೊಂಕಿತನ ಮೇಲೆ ‘ಸಲಿಂಗಕಾಮಿ’ಯಿಂದ ಅತ್ಯಾಚಾರ : ಮನೆಯಲ್ಲಿದ್ದ ನಗದು ದೋಚಿ ಪರಾರಿ

Share.
Exit mobile version