ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಎ.1 ಆರೋಪಿಯಾಗಿರುವಂತ ಪವಿತ್ರಾ ಗೌಡ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ಹಲವು ಮಹತ್ವದ ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದಾವೆ ಎನ್ನಲಾಗುತ್ತಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರ್ಡರ್ ಕೇಸಲ್ಲಿ ಬಂಧನಕ್ಕೆ ಒಳಗಾಗಿರುವಂತ ಎ.1 ಆರೋಪಿ ಪವಿತ್ರಾ ಗೌಡ ಹಾಗೂ ಎ.3 ಆರೋಪಿಯಾಗಿರುವಂತ ಪವನ್ ಜೊತೆಗೂಡಿ ಪೊಲೀಸರು ಅವರ ನಿವಾಸದಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾರೆ.

ಕಳೆದ ಎರಡು ಗಂಟೆಯಿಂದಲೂ ಬೆಂಗಳೂರಿನ ಪವಿತ್ರಾ ಗೌಡ ಮನೆಯಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾರೆ. ಮೊದಲ, ಎರಡನೇ ಮಹಡಿಯಲ್ಲಿ ಸ್ಥಳ ಮಹಜರು ಪೊಲೀಸರು ನಡೆಸುತ್ತಿದ್ದಾರೆ.

ಪವಿತ್ರಾ ಗೌಡ ಅವರ ನೆಲ ಮಹಡಿಯಲ್ಲಿ ಕೆಲಸಗಾರನಾಗಿ ಪವನ್ ವಾಸವಾಗಿದ್ದನಂತೆ. ಪವಿತ್ರಾ ಗೌಡ ಅವರ ನಾಯಿಗಳನ್ನು ನೋಡಿಕೊಳ್ಳೋ ಕೆಲಸ ಮಾಡುತ್ತಿದ್ದನಂತೆ. ಪವಿತ್ರಾ ಗೌಡ ನಿವಾಸಕ್ಕೆ ಆಗಾಗಲ ನಟ ದರ್ಶನ್ ಬಂದು ಹೋಗುತ್ತಿದ್ದನಂತೆ. ಇದೀಗ ಎ.1 ಪವಿತ್ರಾ ಗೌಡ, ಎ3 ಆರೋಪಿ ಪವನ್ ಸಮ್ಮುಖದಲ್ಲಿ ಸ್ಥಳ ಮಹಜರನ್ನು ಪೊಲೀಸರು ನಡೆಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಕೇಂದ್ರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಕೇಂದ್ರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

Share.
Exit mobile version