ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಹಾಸ್ಯನಟ ಚಿಕ್ಕಣ್ಣನನ್ನು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಮತ್ತೊಬ್ಬ ನಟನಿಗೂ ಸಂಕಷ್ಟ ಎದುರಾಗಿ ಎನ್ನಲಾಗುತ್ತಿದೆ.

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು, ಹೊಡೆದು ನಟ ದರ್ಶನ್ ಅಂಡ್ ಟೀಂ ಹಲ್ಲೆ ನಡೆಸಿ, ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಬಳಿಕ ರೆಸ್ಟೋ ಬಾರ್ ನಲ್ಲಿ ಪಾರ್ಟಿ ಕೂಡ ಡಿ ಬಾಸ್ ಗ್ಯಾಂಗ್ ನಡೆಸಿತ್ತಂತೆ. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಂತ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಇಂದು ವಿಚಾರಣೆಯ ವೇಳೆಯಲ್ಲಿ ಚಿಕ್ಕಣ್ಣ ಮತ್ತೊಬ್ಬ ನಟ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಗರಡಿ ಚಿತ್ರದ ನಟ ಯಶಸ್ ಸೂರ್ಯ ಕೂಡ ರೇಣುಕಾಸ್ವಾಮಿ ಹತ್ಯೆ ಬಳಿಕ ನಟ ದರ್ಶನ್ ನಡೆಸಿದ್ದಂತ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಂಬುದಾಗಿ ಹಾಸ್ಯನಟ ಚಿಕ್ಕಣ್ಣ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್, ಹಾಸ್ಯನಟ ಚಿಕ್ಕಣ್ಣ ಬಳಿಕ, ಈಗ ಗರಡಿ ಚಿತ್ರದ ನಟ ಯಶಸ್ ಸೂರ್ಯಗೂ ಪೊಲೀಸರು ನೋಟಿಸ್ ನೀಡಿ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸೋ ಸಾಧ್ಯತೆ ಇದೆ.

BREAKING : ಜಾರ್ಖಂಡ್’ನಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ; ನಾಲ್ವರು ನಕ್ಸಲರ ಹತ್ಯೆ, ಇಬ್ಬರ ಬಂಧನ

BREAKING : ಜಾರ್ಖಂಡ್’ನಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ; ನಾಲ್ವರು ನಕ್ಸಲರ ಹತ್ಯೆ, ಇಬ್ಬರ ಬಂಧನ

Share.
Exit mobile version