ಚಿತ್ರದುರ್ಗ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪುತ್ರನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಹೃದಯಾಘಾತ ನಿಧನಹೊಂದಿದ ಚಂದ್ರಪ್ಪ ಅಂತ್ಯಕ್ರಿಯೆಗೆ ಪುತ್ರ ಅನಿಲ್‌ಕುಮಾರ್ ನನ್ನು ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಹೃದಯಾಘಾತದಿಂದ ಸಾವನ್ನಪ್ಪಿದ್ದ ಆರೋಪಿ ಅನಿಲ್‌ಕುಮಾರ್ ತಂದೆ ಚಂದ್ರಪ್ಪ ಅಂತ್ಯಕ್ರಿಯೆಗೆ ಕರೆದುಕೊಂಡಲು ಹೋಗಲು ಕೋರ್ಟ್‌ ನ ಅನುಮತಿ ಕೇಳಿದ್ದು, ಕೋರ್ಟ್‌ ಅನುಮತಿ ಕೊಟ್ರೆ ಅನು ತಂದೆಯ ಅಂತ್ಯಕ್ರಿಯೆಲ್ಲಿ ಭಾಗವಹಿಸಲಿದ್ದಾನೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಗನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿದ್ದ ಹೊಳಲ್ಕೆರೆ ರಸ್ತೆಯ ಸಿಹಿನೀರು ಹೊಂಡ ಬೀದಿಯ ನಿವಾಸಿ ಚಂದ್ರಪ್ಪ (55) ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

Share.
Exit mobile version