ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಾವಿನ ಕುರಿತು ಶಾಸಕ ಎಂ,ಪಿ ರೇಣುಕಾಚಾರ್ಯ ಅಳಲು ತೋಡಿಕೊಂಡಿದ್ದು, ಪೊಲೀಸರಿಗೆ ನನ್ನ ಮಗನನ್ನು ಹುಡುಕಲು ಆಗಲಿಲ್ಲ, ಪಕ್ಷದ ಕಾರ್ಯಕರ್ತರು ದೇಹವನ್ನು ಪತ್ತೆ ಮಾಡಿದರು ಎಂದು ಹೇಳಿದರು. 

ಪೊಲೀಸರ ಕಾರ್ಯಕ್ಷಮತೆ ಮತ್ತು ಬದ್ದತೆಯ ಬಗ್ಗೆ ಬಹಳ ಬೇಸರ ಹೊರ ಹಾಕಿದ್ದು, ತಮ್ಮ ಪಕ್ಷದ ಶಾಸಕರೇ ಚಂದ್ರು ಕಾರನ್ನುಪತ್ತೆ ಮಾಡಿದ್ದು, ಜನ ತೋರಿರುವ ಪ್ರೀತಿ ಅಸಧಾರಣವಾಗಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

 ಪ್ರಕರಣಕ್ಕೆ ಟ್ವಿಸ್ಟ್ 

ಚಂದ್ರಶೇಖರ್ ನದ್ದು  ಅಪಘಾತವಾಗಿಲ್ಲ, ಅದೊಂದು ಯೋಜಿತ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿರುವ ಹಿನ್ನೆಲೆ ಪ್ರಕಣ ದಾಖಲಿಸಿಕೊಂಡಿರುವ ಹೊನ್ನಾಳಿ ಪೊಲೀಸರು ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇದೀಗ ಚಂದ್ರಶೇಖರ್ ನಾಪತ್ತೆಯಾದ ದಿನ. ಅ. 30 ರಂದು ಆತನ ಮೊಬೈಲ್ ಗೆ ಒಂದೇ ನಂಬರ್ ನಿಂದ 10ಕ್ಕೂ ಹೆಚ್ಚು ಸಲ ಕರೆ ಬಂದಿದೆ ಎಂದು ತಿಳಿದುಬಂದಿದೆ.

 ಚಂದ್ರಶೇಖರ್ ಮೊಬೈಲ್ ಪರಿಶೀಲನೆ ನಡೆಸಿದಾಗ ಕಾಲ್ ಹಿಸ್ಟ್ರಿಯಲ್ಲಿ ಗೊತ್ತಾಗಿದೆ. ಅದು ಕೂಡ 10 ಗಂಟೆ ವೇಳೆ ಅಂದು ರಾತ್ರಿ 10 ಗಂಟೆ ವೇಳೆ ಚಂದ್ರಶೇಖರ್ ಗೌರಿಗದ್ದೆಯಲ್ಲಿದ್ದ. ಈ ವೇಳೆ ಕೊಪ್ಪದಿಂದ ಆತನಿಗೆ ಫೋನ್ ಕಾಲ್ ಸತತವಾಗಿ ಬಂದಿದ್ದಾಗಿ ತನಿಖೆ ವೇಳೆ ತಿಳಿದುಬಂದಿದೆ. ಈ ಕಾಲ್ ಬಂದಿರುವುದು ಚಂದ್ರಶೇಖರ್ ಸಾವಿಊ ಲಿಂಕ್ ಆಗಿದಿಯಾ? ಎಂಬ ಅನುಮಾನ ವ್ಯಕ್ತವಾಗಿದೆ.

ರಾಜ್ಯ ಸರ್ಕಾರಕ್ಕೆ ಮತ್ತೊಂದು ಬಿಗ್‌ ಶಾಕ್‌: ಮತ್ತೆ ಪ್ರತಿಭಟನೆ ಎಚ್ಚರಿಕೆ ನೀಡಿದ 108 ಸಿಬ್ಬಂದಿ ವೇತನ

Share.
Exit mobile version