22 ಅಂತಾರಾಷ್ಟ್ರೀಯ ವಿಮಾನಗಳಲ್ಲಿ ʼಮೊಬೈಲ್ ಸೇವೆʼ ಆರಂಭಿಸಿದ ʼರಿಲಯನ್ಸ್ ಜಿಯೋʼ – Kannada News Now


India

22 ಅಂತಾರಾಷ್ಟ್ರೀಯ ವಿಮಾನಗಳಲ್ಲಿ ʼಮೊಬೈಲ್ ಸೇವೆʼ ಆರಂಭಿಸಿದ ʼರಿಲಯನ್ಸ್ ಜಿಯೋʼ

ಹೊಸದಿಲ್ಲಿ : ರಿಲಯನ್ಸ್ ಜಿಯೋ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ 22 ವಿಮಾನಗಳಲ್ಲಿ ಮೊಬೈಲ್ ಸೇವೆ ಗಳನ್ನು ನೀಡಲು ಆರಂಭಿಸಿದ್ದು, ರೂ.499ಕ್ಕೆ ಒಂದು ದಿನದ ಪ್ಲಾನ್‌ಗಳನ್ನು ಆರಂಭಿಸಿದೆ.

ಕಂಪನಿಯ ಪಾಲುದಾರ ವಿಮಾನಯಾನ ಸಂಸ್ಥೆಗಳಾದ ಕ್ಯಾಥಯ್ ಪೆಸಿಫಿಕ್, ಸಿಂಗಪುರ್ ಏರ್ ಲೈನ್ಸ್, ಎಮಿರೇಟ್ಸ್, ಎತಿಹಾದ್ ಏರ್ ವೇಸ್, ಯೂರೋ ವಿಂಗ್ಸ್, ಲುಫ್ತಾನ್ಸಾ, ಮಾಲಿಂಡೊ ಏರ್, ಬಿಮನ್ ಬಾಂಗ್ಲಾದೇಶ್ ಏರ್ ಲೈನ್ಸ್ ಮತ್ತು ಅಲಿಟಾಲಿಯಾ ಇದ್ರಲ್ಲಿ ಸೇರಿವೆ.

BREAKING : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ತಂಡದ ನಾಯಕ ಜೋನ್ಸ್ ಹೃದಯಾಘಾತದಿಂದ ನಿಧನ

ಇದರೊಂದಿಗೆ ಜಿಯೋ ಇನ್-ಫ್ಲೈಟ್ ಸೇವೆಯನ್ನ ನೀಡುತ್ತಿರುವ ಎರಡನೇ ಭಾರತೀಯ ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಟಾಟಾ ಸಮೂಹ ಸಂಸ್ಥೆ ನೆಲ್ಕೊ ಲಂಡನ್ ಮಾರ್ಗದಲ್ಲಿ ವಿಮಾನ ಸೇವೆ ಒದಗಿಸಲು ಆರಂಭಿಸಿದೆ.

1 ದಿನದ ವ್ಯಾಲಿಡಿಟಿ ಹೊಂದಿರುವ ಭಾರತದ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಮೂರು ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್‌ಗಳನ್ನು ಕಂಪನಿ ಘೋಷಿಸಿದೆ.

ಎಲ್ಲಾ ಪ್ಲಾನ್ ಗಳು 100 ನಿಮಿಷಗಳ ಔಟ್ ಗೋಟಿಂಗ್ ವಾಯ್ಸ್ ಕರೆಗಳು ಮತ್ತು 100 SMS ಗಳನ್ನ ನೀಡುತ್ತಿದ್ದು, ₹499 ಪ್ಲಾನ್ 250 ಮೆಗಾಬೈಟ್ (MB) ಮೊಬೈಲ್ ಡೇಟಾ ನೀಡುತ್ತದೆ. ಇನ್ನು ₹699 ಪ್ಲಾನ್‌ 500 MB ಮತ್ತು ₹999 ಪ್ಲಾನ್ 1 GB ಡೇಟಾದೊಂದಿಗೆ ಬರುತ್ತೆ.

BIG NEWS : ಕೊರೋನಾದಿಂದ ‘ಶಾಸಕ ನಾರಾಯಣರಾವ್’ ವಿಧಿವಶ
error: Content is protected !!