• STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Facebook Twitter Instagram
Kannada | Kannada News | Karnataka News | India NewsKannada | Kannada News | Karnataka News | India News
  • STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Home»BUSINESS»ರಿಲಯನ್ಸ್ ‘JioAirFiber’ಗೆ ಚಾಲನೆ: ಇನ್ಮುಂದೆ ಬೆಂಗಳೂರು ಸೇರಿ 8 ನಗರಗಳಲ್ಲಿ ಕೇಬಲ್‌ ಇಲ್ಲದೆ ‘ಅಲ್ಟ್ರಾ ಹೈ ಸ್ಪ್ರೀಡ್‌ ಇಂಟರ್ನೆಟ್‌’ ಲಭ್ಯ
BUSINESS

ರಿಲಯನ್ಸ್ ‘JioAirFiber’ಗೆ ಚಾಲನೆ: ಇನ್ಮುಂದೆ ಬೆಂಗಳೂರು ಸೇರಿ 8 ನಗರಗಳಲ್ಲಿ ಕೇಬಲ್‌ ಇಲ್ಲದೆ ‘ಅಲ್ಟ್ರಾ ಹೈ ಸ್ಪ್ರೀಡ್‌ ಇಂಟರ್ನೆಟ್‌’ ಲಭ್ಯ

By kannadanewsnow09September 19, 7:09 pm

ನವದೆಹಲಿ: ಗಣೇಶ ಚತುರ್ಥಿಯ ವಿಶೇಷ ಸಂದರ್ಭದಲ್ಲಿ ಮುಕೇಶ್‌ ಅಂಬಾನಿ ಅವರ ಒಡೆತನದ ರಿಲಯನ್ಸ್ ಜಿಯೋ, ದೇಶದ 8 ಮೆಟ್ರೋ ನಗರಗಳಲ್ಲಿ ಜಿಯೋ ಏರ್‍‌ ಫೈಬರ್‍‌ಗೆ ಚಾಲನೆ ನೀಡಿದೆ.

ಜಿಯೋ ಏರ್‍‌ ಫೈಬರ್‍‌ ಒಂದು ಇಂಟಿಗ್ರೇಟೆಡ್‌ ನೇರ ಪರಿಹಾರವಾಗಿದ್ದು, ಹೋಮ್‌ ಎಂಟರ್‍‌ಟೈನ್‌ಮೆಂಟ್‌, ಸ್ಮಾರ್ಟ್‌ ಹೋಮ್‌ ಮತ್ತು ಅತಿ ವೇಗದ ಬ್ರಾಡ್‌ಬ್ಯ್ರಾಂಡ್‌ ಸೇವೆಯನ್ನು ಪೂರೈಸಲಿದೆ.

ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕತಾ, ಅಹಮದಾಬಾದ್, ಬೆಂಗಳೂರು, ಚೆನ್ನೈ ಮತ್ತು ಪುಣೆ ಮೆಟ್ರೋ ನಗರಗಳಲ್ಲಿ ಜಿಯೋ ಏರ್‍‌ ಫೈಬರ್‍‌ ಸೇವೆಗೆ ಚಾಲನೆ ನೀಡಲಾಗಿದೆ.

ಏರ್ ಫೈಬರ್ ಮತ್ತು ಏರ್ ಫೈಬರ್ ಮ್ಯಾಕ್ಸ್ ಹೆಸರುಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಗ್ರಾಹಕರಿಗೆ ಏರ್‍‌ ಫೈಬರ್‍‌ ಎರಡು ವೇಗದ ಸೇವೆಯನ್ನು ಒದಗಿಸಲಿದೆ, 30 ಎಂಬಿಪಿಎಸ್‌  ಮತ್ತು 100 ಎಂಬಿಪಿಎಸ್‌ ವೇಗದಲ್ಲಿ ಇಂಟರ್ನೆಟ್‌ ಲಭ್ಯವಾಗಲಿದೆ. ಕಂಪನಿಯು 30 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ಅನ್ನು 599 ರೂ.ಗಳಿಗೆ. 100 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ ಅನ್ನು 899 ರೂ.ಗಳಿಗೆ ನೀಡುತ್ತಿದೆ. ಈ ಎರಡೂ ಪ್ಲಾನ್‌ಗಳಿಂದ ಗ್ರಾಹಕರಿಗೆ 550ಗೂ ಹೆಚ್ಚು ಡಿಜಿಟಲ್‌ ಚಾನೆಲ್‌ಗಳು ಮತ್ತು 14 ಮನರಂಜನಾ ಆಪ್‌ಗಳು ದೊರೆಯಲಿವೆ.

ಏರ್ ಫೈಬರ್ ಯೋಜನೆಯಡಿಯಲ್ಲಿ, ಕಂಪನಿಯು 100 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ ಸೇವೆಯನ್ನು  1199 ರೂಗಳಿಗೆ ಪರಿಚಯಿಸಿದೆ. ಇದರಲ್ಲಿ ಮೇಲೆ ಹೇಳಿದ ಚಾನಲ್‌ಗಳು ಮತ್ತು ಅಪ್ಲಿಕೇಶನ್‌ಗಳ ಜೊತೆಗೆ, ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಅಪ್ಲಿಕೇಶನ್‌ಗಳು ಸಹ ಲಭ್ಯವಿರುತ್ತವೆ.

ಹೆಚ್ಚಿನ ಇಂಟರ್ನೆಟ್ ವೇಗವನ್ನು ಬಯಸುವ ಗ್ರಾಹಕರು ‘ಏರ್ ಫೈಬರ್ ಮ್ಯಾಕ್ಸ್’ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಕಂಪನಿಯು ಮಾರುಕಟ್ಟೆಯಲ್ಲಿ 300 ಎಂಬಿಪಿಎಸ್‌ ನಿಂದ 1000 ಎಂಬಿಪಿಎಸ್‌ ವರೆಗೆ ಅಂದರೆ 1 ಜಿಬಿಪಿಎಸ್‌ ವರೆಗಿನ ಮೂರು ಯೋಜನೆಗಳನ್ನು ಪರಿಚಯಿಸಿದೆ. 300 ಎಂಬಿಪಿಎಸ್‌ ವೇಗದ ಇಂಟರ್ನೆಟ್‌,  ರೂ 1499 ಕ್ಕೆ ಲಭ್ಯವಿರುತ್ತದೆ. ಗ್ರಾಹಕರು 2499 ರೂ.ಗೆ 500 ಎಂಬಿಪಿಎಸ್‌ ವೇಗದ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದು. ಅಲ್ಲದೆ ಗ್ರಾಹಕರು 1 ಜಿಬಿಪಿಎಸ್‌ ವೇಗದ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅದಕ್ಕೆ 3999 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. 550 ಕ್ಕೂ ಹೆಚ್ಚು ಡಿಜಿಟಲ್ ಚಾನೆಲ್‌ಗಳು, 14 ಮನರಂಜನಾ ಅಪ್ಲಿಕೇಶನ್‌ಗಳು ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಅಪ್ಲಿಕೇಶನ್‌ಗಳು ಈ ಪ್ಲಾನ್‌ನಲ್ಲಿ ದೊರೆಯುತ್ತವೆ.

ಜಿಯೋದ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು ಭಾರತದಾದ್ಯಂತ 15 ಲಕ್ಷ ಕಿ.ಮೀ.ಗಳಷ್ಟುವ್ಯಾಪಿಸಿದೆ. ಕಂಪನಿಯು ತನ್ನ ಜಿಯೋ ಫೈಬರ್ ಸೇವೆಯೊಂದಿಗೆ ಇದುವರೆಗೆ 1 ಕೋಟಿಗೂ ಹೆಚ್ಚು ಕುಟುಂಬಗಳನ್ನು  ಸಂಪರ್ಕಿಸಿದೆ. ಆದರೆ ಇನ್ನೂ ಕೋಟಿಗಟ್ಟಲೆ  ಮನೆಗಳನ್ನು ಬೆಸೆಯಬೇಕಿದ್ದು, ಅಲ್ಲಿ ಕೇಬಲ್‌ ಅಥವಾ ಫೈಬರ್ ಸಂಪರ್ಕವನ್ನು ಒದಗಿಸುವುದು ತುಂಬಾ ಕಷ್ಟಕರವಾಗಿದೆ. ಜಿಯೋ ಏರ್ ಫೈಬರ್ ಅಂತಹ ಕಟ್ಟಡ ಕಡೆಯ ಬಿಂದುವನ್ನು ಬೆಸೆಯುವ ಕಷ್ಟವನ್ನು ಕಡಿಮೆ ಮಾಡುತ್ತದೆ. ಜಿಯೋ ಏರ್ ಫೈಬರ್ ಮೂಲಕ 20 ಕೋಟಿ ಮನೆಗಳು ಮತ್ತು ಪರಿಸರಗಳನ್ನು ತಲುಪಲು ಕಂಪನಿಯು ಆಶಿಸುತ್ತಿದೆ.

ಜಿಯೋ ಏರ್ ಫೈಬರ್ ಬಿಡುಗಡೆ ಕುರಿತು ಮಾತನಾಡಿದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾದ ಆಕಾಶ್ ಅಂಬಾನಿ, “ನಮ್ಮ ಫೈಬರ್-ಟು-ದಿ-ಹೋಮ್ ಸೇವೆ, ಜಿಯೋ ಫೈಬರ್, 1 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದೆ.  ಪ್ರತಿ ತಿಂಗಳು ಲಕ್ಷಾಂತರ ಜನರು ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ.  ಆದರೆ ಇನ್ನೂ ಲಕ್ಷಾಂತರ ಮನೆಗಳು ಮತ್ತು ಸಣ್ಣ ವಹಿವಾಟುಗಳನ್ನು ಬೆಸೆಯುವುದು ಬಾಕಿ ಇದೆ.

ಜಿಯೋ ಏರ್ ಫೈಬರ್‌ನೊಂದಿಗೆ, ನಾವು ನಮ್ಮ ದೇಶದ ಪ್ರತಿ ಮನೆಯನ್ನು ಅದೇ ಗುಣಮಟ್ಟದ ಸೇವೆಯೊಂದಿಗೆ ವೇಗವಾಗಿ ವಿಸ್ತರಿಸಲಿದ್ದೇವೆ.  ಶಿಕ್ಷಣ, ಆರೋಗ್ಯ, ಕಣ್ಗಾವಲು ಮತ್ತು ಸ್ಮಾರ್ಟ್ ಹೋಮ್‌ ಸೇವೆಗಳಲ್ಲಿ ತನ್ನದೇ ಆದ ರೀತಿಯಲ್ಲಿ ಪರಿಹಾರಗಳ ಕಲ್ಪಿಸುವ ಮೂಲಕ ಲಕ್ಷಾಂತರ ಮನೆಗಳಿಗೆ ವಿಶ್ವ ದರ್ಜೆಯ ಡಿಜಿಟಲ್ ಮನರಂಜನೆ, ಸ್ಮಾರ್ಟ್ ಹೋಮ್ ಸೇವೆಗಳು ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು  ಜಿಯೋ ಏರ್ ಫೈಬರ್ ಒದಗಿಸುತ್ತಿದೆ” ಎಂದು ತಿಳಿಸಿದರು.

ಜಿಯೋ ಏರ್ ಫೈಬರ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಬುಕ್ ಮಾಡಬಹುದು. 60008-60008 ಗೆ ಮಿಸ್‌ ಕಾಲ್ ನೀಡುವ ಮೂಲಕ ಅಥವಾ www.jio.com ಗೆ ಭೇಟಿ ನೀಡುವ ಮೂಲಕ ಬುಕಿಂಗ್ ಮಾಡಬಹುದು. ಜಿಯೋ ಏರ್ ಫೈಬರ್ ಅನ್ನು ಜಿಯೋ ಸ್ಟೋರ್‌ಗಳಿಂದಲೂ ಖರೀದಿಸಬಹುದು.

‘ಇದು ನಮ್ಮದು, ಇದು ನಮ್ಮದು’ : ಮಹಿಳಾ ಮೀಸಲಾತಿ ಮಸೂದೆ ಕುರಿತು ‘ಸೋನಿಯಾ ಗಾಂಧಿ’ ಪ್ರತಿಕ್ರಿಯೆ

BREAKING : ‘ವಾಟ್ಸಾಪ್ ಚಾನೆಲ್’ ಸೇರಿದ ಪ್ರಧಾನಿ ಮೋದಿ : ‘ನಮೋ’ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ

blank
Share. Facebook Twitter LinkedIn WhatsApp Email

Related Posts

WATCH VIDEO: ʻಫ್ರಿಜ್ʼ ಅನ್ನು ತಲೆ ಮೇಲೆ ಹೊತ್ತು ಸೈಕಲ್‌ ತುಳಿಯುತ್ತಾ ಸಾಗಿದ ವ್ಯಕ್ತಿ… ವಿಡಿಯೋ ವೈರಲ್

October 05, 8:21 am

ICC World Cup 2023: ʻICC ವಿಶ್ವಕಪ್ʼ ಪಂದ್ಯಗಳ ದಿನಾಂಕ, ವೇಳಾಪಟ್ಟಿ, ಭಾರತದ ಆಟಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

October 05, 8:01 am

BIG UPDATE: ಸಿಕ್ಕಿಂ ಪ್ರವಾಹ: 14 ಮಂದಿ ಸಾವು, 22 ಯೋಧರು ಸೇರಿ 102 ಮಂದಿ ನಾಪತ್ತೆ | Sikkim Flash Floods

October 05, 8:00 am
Recent News
blank

ಸಾಗುವಳಿ ಪತ್ರ ನಿರೀಕ್ಷೆಯಲ್ಲಿದ್ದ ‘ಬಗರ್ ಹುಕುಂ ರೈತ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ತಂತ್ರಾಂಶ’ ಅನುಷ್ಠಾನ

October 05, 8:30 am
blank

ಹಾಲಶ್ರೀ ವಿರುದ್ಧ ಮತ್ತೊಂದು ವಂಚನೆ ಪ್ರಕರಣ : ಸ್ಥಳ ಮಹಜರು ನಡೆಸಿ ಹಾಲಶ್ರೀಯನ್ನ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಿದ ಮುಂಡರಗಿ ಪೊಲೀಸರು

October 05, 8:30 am
blank

WATCH VIDEO: ʻಫ್ರಿಜ್ʼ ಅನ್ನು ತಲೆ ಮೇಲೆ ಹೊತ್ತು ಸೈಕಲ್‌ ತುಳಿಯುತ್ತಾ ಸಾಗಿದ ವ್ಯಕ್ತಿ… ವಿಡಿಯೋ ವೈರಲ್

October 05, 8:21 am
blank

BREAKING: ಶಿವಮೊಗ್ಗ DCC ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ನಿವಾಸದ ಮೇಲೆ ED ಅಧಿಕಾರಿಗಳ ದಾಳಿ

October 05, 8:20 am
State News
don't tick

ಕೆನಡಾದಿಂದ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 5 ಮಂದಿ ಭಾರತೀಯರು ಸೇರಿ 8 ಮಂದಿ ಸಾವು

By KNN IT TEAMApril 01, 9:03 am0

ನ್ಯೂಯಾರ್ಕ್‌: ಕೆನಡಾ-ಅಮೆರಿಕ ಗಡಿ ಬಳಿಯ ಸೇಂಟ್ ಲಾರೆನ್ಸ್ ನದಿಯ ದಡದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಕ್ಕಳು ಸೇರಿದಂತೆ…

blank

BIGG NEWS : ಇಂದು ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ : ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಕೆ

April 01, 8:57 am
blank

BIGG NEWS : `SSLC’ ಪರೀಕ್ಷೆ : ಹಾಜರಾತಿ ಕೊರತೆಯಿಂದ 27 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು!

April 01, 8:23 am
blank

BIGG NEWS : ಹೊಸಕೋಟೆಯ ಮೇಡಹಳ್ಳಿಯಲ್ಲಿ ಅಗ್ನಿ ದುರಂತ : ಚಿಕಿತ್ಸೆ ಫಲಿಸದೇ 7 ಕಾರ್ಮಿಕರು ಸಾವು!

April 01, 8:06 am
blank

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • State
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US
blank blank blank blank

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

Copyright © 2023 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.