ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಋತುಮಾನದ ಇನ್ಫ್ಲೂಯೆಂಜಾ, ಪ್ಲೋ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮಾರ್ಗಸೂಚಿಗಳಂತೆ ಸಲಹೆಯನ್ನು ಬಿಡುಗಡೆ ಮಾಡಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸಾರ್ವಜನಿಕರಿಗೆ ಸಲಹೆಗಳನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಉದ್ದಗಲಕ್ಕೂ ಋತುಮಾನದ ಇನ್ಫ್ಲೂಯೆಂಜಾ, ಪ್ಲೊ ಪ್ರಕರಣಗಳ ಸಂಖ್ಯೆ ಹೆಚ್ಚಳವನ್ನು ಗಮನಿಸಬಹುದಾಗಿದೆ ಎಂದಿದ್ದಾರೆ.
ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಐಸಿಎಂಆರ್ ಲ್ಯಾಬ್ ಡೇಟಾ ವಿಶ್ಲೇಷಣೆಯಿಂದ ಕರ್ನಾಟಕ ರಾಜ್ಯದಲ್ಲೂ ಇನ್ಫ್ಲೋಯೆಂಜಾ ಹೆಚ್ಚಳವನ್ನು ಗಮನಿಸಲಾಗಿದೆ ಎಂದು ಹೇಳಿದ್ದಾರೆ.
ಒಸಲ್ಟಾಮಿವಿರ್ ಆಂಟಿ-ವೈರಲ್, ಇನ್ಫ್ಲೂಯೆಂಜಾ ಚಿಕಿತ್ಸೆಗೆ ಆಯ್ಕೆಯಾದ ಔಷಧವಾಗಿದ್ದು, ಅಗತ್ಯ ಔಷಧಿಗಳ ಪಟ್ಟಿಯನ್ನು ಸೇರಿಸಲಾಗಿದೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುತ್ತದೆ ಎಂದಿದ್ದಾರೆ.
ಸಾರ್ವಜನಿಕರು ಅನುಸರಿಬೇಕಾದ ಕ್ರಮಗಳು
- ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕವಸ್ತ್ರದಿಂದ ಅಥವಾ ಟಿಳ್ಯೂ ಕಾಗದದಿಂದ ಮುಚ್ಚಿಕೊಳ್ಳುವುದು.
- ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುವುದು
- ಅಗತ್ಯವಿಲ್ಲದೇ ಕಣ್ಣು, ಮೂಗು ಮತ್ತು ಬಾಯಿಯನ್ನು ಕೈತೊಳೆಯದೇ ಮುಟ್ಟಬಾರದು.
- ಅತಿಯಾದ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದು.
- ಜನಸಂದಣಿ ಸ್ಥಳಗಳಲ್ಲಿ ಮಾಸ್ಕ್ ಬಳಸುವುದು
- ಪ್ಲೋ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಕನಿಷ್ಠ ದೂರುವಿರುವಂತೆ ಎಚ್ಚರವಹಿಸುವುದು
- ಚೆನ್ನಾಗಿ ನಿದ್ದೆ ಮಾಡುವುದು, ದೈಹಿಕ ಚಟುವಟಿಕೆಯಿಂದ ಇರುವುದು.
ಮಾಡಬಾರದ ಕ್ರಿಯೆಗಳು
- ಹಸ್ತಲಾಘವ, ಆಲಿಂಗನ ಮತ್ತು ಚುಂಬನದ ಮೂಲಕ ಶುಭ ಕೋರುವುದು.
- ರಸ್ತೆಯಲ್ಲಿ, ಜನರಿರುವ ಪ್ರದೇಶದಲ್ಲಿ ಉಗುಳದಿರುವುದು
- ವೈದ್ಯರ ಸಲಹೆ ಇಲ್ಲದೇ ಔಷಧಿಗಳನ್ನು, ಆಂಟಿ ಬಯಾಟಿಕ್ ಗಳನ್ನು ತೆಗೆದುಕೊಳ್ಳುವುದು
- ಅನಾವಶ್ಯಕವಾಗಿ ಜನಸಂದಣಿ ಇರುವ ಪ್ರದೇಶಗಳಿಗೆ ಭೇಟಿ ನೀಡುವುದು
ನಿಮಗೆ ಇನ್ಫ್ಲೂಯೆಂಜಾ, ಪ್ಲೊ ಇದೆ ಎಂದು ಭಾವಿಸಿದ್ರೇ ಹೀಗೆ ಮಾಡಿ
- ಜ್ವರ, ಶೀತ, ಅಸ್ವಸ್ಥತೆ, ಹಸಿವಿಲ್ಲದಿರುವುದು, ಮೈಕೈ ನೋವು, ವಾಕರಿಕೆ, ಸೀನುವಿಕೆ ಹಾಗೂ ದೀರ್ಘಕಾಲದ ಒಣ ಕೆಮ್ಮು ಇತ್ಯಾದಿ ಇನ್ಫ್ಲೂಯೆಂಜಾ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಈ ರೀತಿಯ ಲಕ್ಷಣಗಳು ಹೆಚ್ಚಾದಲ್ಲಿ ನಿರ್ಲಕ್ಷ್ಯ ಮಾಡದೇ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವುದು.
- ವೈದ್ಯರು ಸಲಹೆ ಮಾಡಿದರೇ ಮನೆಯಲ್ಲಿಯೇ ಇರಿ, ಪ್ರಯಾಣಿಸಬೇಡಿ ಅಥವಾ ಕೆಲಸ ಶಾಲೆಗೆ ಹೋಗಬೇಡಿ. ಮುಖಗವಸು ಬಳಸುವುದು.
- ನಿಮ್ಮ ರೋಗ ಲಕ್ಷಣಗಳು ಪ್ರಾರಂಭವಾದ ನಂತ್ರ ಕನಿಷ್ಠ 7 ದಿನಗಳವರೆಗೆ ಅಥವಾ ನಿಮಗೆ 24 ಗಂಟೆಗಳ ಕಾಲ ರೋಗ ಲಕ್ಷಣಗಳಿಲ್ಲದಿರುವವರೆಗೆ ನಿಕಟ ಸಂಪಕ್ರವನ್ನು ತಪ್ಪಿಸಿ.
ವರದಿ: ವಸಂತ ಬಿ ಈಶ್ವರಗೆರೆ