ಸುಭಾಷಿತ :

Monday, March 30 , 2020 12:02 AM

ರಿಲೀಸ್ ಆಯ್ತು ಆನೆಬಲದ ಚಂದದ ಭಾವನೆ ವೀಡಿಯೋ ಸಾಂಗ್..!


Saturday, February 22nd, 2020 10:07 am

ಸಿನಿಮಾಡೆಸ್ಕ್: ಶುರುವಾದಾಗಿನಿಂದ ತನ್ನ ಆನೆಬಲದ ಶಕ್ತಿ ಪ್ರದರ್ಶನ ಮಾಡ್ತಾ ಸದ್ದು ಮಾಡ್ತಾನೇ ಗಾಂಧಿನಗರದಲ್ಲಿ ಸುದ್ದಿಯಾಗಿ ರಿಲೀಸ್ ಗೆ ರೆಡಿಯಾಗ್ತಿರೋ ಚಿತ್ರವೇ ಹೊಸಬರ ಆನೆಬಲ. ಜನತಾ ಟಾಕೀಸ್ ಸಂಸ್ಥೆಯ ಚೊಚ್ಚಲ ನಿರ್ಮಾಣದ ಈ ‘ಆನೆಬಲ’ ಹಳ್ಳಿ ಸೊಗಡಿನ ವೈಭವವನ್ನ ನೈಜವಾಗಿ ತೋರಿಸೋ ಸಾಹಸಕ್ಕೆ ಕೈ ಹಾಕಿದೆ.

ಸೊನಗಹಳ್ಳಿ ರಾಜು ಆ್ಯಕ್ಷನ್ ಕಟ್ ಹೇಳಿರೋ ಆನೆಬಲ ಚಿತ್ರದಿಂದ ಇತ್ತಿಚಿಗಷ್ಟೇ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ “ಮುದ್ದೆ ಮುದ್ದೆ ಹಾಡು” ಹಾಗೂ ಸೂನಗಹಳ್ಳಿ ರಾಜು ಬರೆದಿರುವ “ಮಳವಳ್ಳಿ ಜಾತ್ರೆಲಿ ತುಂಡು ಹೈಕ್ಳಾ ದರ್ಬಾರು”…. ಹಾಡುಗಳು ಹೊರಬಮದು ಬಾಯಲ್ಲಿ ಗುನುಗೋ ಗೀತೆಗಳಾಗಿದ್ವು.ನಂತರ ಚಿತ್ರದ ಚಂದದ ಭಾವನೆ’ ಎಂಬ ಲಿರಿಕಲ್ ವಿಡಿಯೋ ಯು ಟ್ಯೂಬ್ನಲ್ಲಿ ಬಿಡುಗಡೆ ಆಗಿತ್ತು. ಯೋಗರಾಜ್ ಭಟ್ ರ ಸಾಹಿತ್ಯ, ಅನನ್ಯ ಭಟ್ ಧ್ವನಿಯಲ್ಲಿ ಇಂಪಾಗಿ ಬಂದಿರೋ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ವಿತ್ತು. ಈಗ ಈ ಹಾಡಿನ ಅಫಿಶಿಯಲ್ ವೀಡಿಯೋ ರಿಲೀಸ್ ಆಗಿದೆ. ಹಾಡುನಲ್ಲಿರೋ ಸಾಹಿತ್ಯ ಆಡುಭಾಷೆಯಲ್ಲೇ ಗಮನಸೆಳಿತಿದ್ದು,ಯೋಗರಾಜ್ ಭಟ್ಟರ ಪೋಲಿ ಪ್ರೀತಿಯ ಸಾಹಿತ್ಯ ಇಷ್ಟವಾಗತ್ತೆ. ಚಂದದ ಭಾವನೆ ಹಾಡಿನಲ್ಲಿ ಪ್ರೀತಿಯಲ್ಲಿ ತೇಲಾಡುವ ಪ್ರೇಮಪಕ್ಷಿಗಳ ಸುತ್ತಾಟ,ಪೋಲಿತನ,ಪೋಲಿತನದ ಸಂಭಾಷಣೆ ಹಾಡಿನಲ್ಲಿ ಪ್ರಕೃತಿಯ ಹಚ್ಚಹಸಿರಿನ ಚಿತ್ರೀಕರಣದೊಂದಿಗೆ ಇಂಟ್ರಸ್ಟಿಂಗ್ ಅನ್ಸತ್ತೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಬಂದಿದ್ದು, ಜೆ.ಟಿ.ಬೆಟ್ಟೆಗೌಡ ಕೀಲಾರ ಅವರ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಅವರ ಸಂಕಲನವಿದ್ದು ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ಚಿತ್ರಕ್ಕೆ ಬಂಡವಾಳವಿದೆ..

ಚಿತ್ರದಲ್ಲಿ ಸಾಗರ್ , ರಕ್ಷಿತಾ, ಮಲ್ಲರಾಜು, ಚಿರಂಜೀವಿ, ಹರೀಶ್, ಗೌತಮ್, ಮುತ್ತುರಾಜ್, ಶ್ರೇಷ್ಠ, ಉದಯ್, ಕೆಂಚೇಗೌಡ, ಶಿವಕುಮಾರ್, ಶಂಭುಗೌಡ, ಮಂಜಣ್ಣ, ಗೌರಮ್ಮ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.ಸಧ್ಯ ರಿಲೀಸ್ ಆಗಿರೊ ಆನೆಬಲ ಚಿತ್ರದ ಹಾಡುಗಳನ್ನ ನೋಡಿದ ಸಿನಿರಸಿಕರು ಆನೆಬಲದ ಬಲಪ್ರಯೋಗ ಥಿಯೇಟರ್ ನಲ್ಲಿ ಆಗೋ ದಿನಾಂಕವನ್ನು ಎದುರುನೊಡ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions