ಕನ್ನಡ ಸಿನಿ ಕಾರ್ಮಿಕರಿಗೆ ರಿಲಾಯನ್ಸ್ ಫೌಂಡೇಷನ್‌ನಿಂದ 2 ಕೋಟಿ ರೂ. ನೆರವು ಘೋಷಣೆ – Kannada News Now


Film Sandalwood

ಕನ್ನಡ ಸಿನಿ ಕಾರ್ಮಿಕರಿಗೆ ರಿಲಾಯನ್ಸ್ ಫೌಂಡೇಷನ್‌ನಿಂದ 2 ಕೋಟಿ ರೂ. ನೆರವು ಘೋಷಣೆ

ಸಿನಿಮಾಡೆಸ್ಕ್ : ಪ್ರಪಂಚದಾದ್ಯಂತ ಕೊರೋನಾ ವೈರಸ್ ಸೋಂಕಿಗೆ ಲಕ್ಷಾಂತರ ಜನ ಸಾವನ್ನಪ್ಪಿದ್ದು, ಇಡಿ ಪ್ರಪಂಚವೆ ತತ್ತರಿಸಿ ಹೋಗಿವೆ. ಜೊತೆಗೆ ಹಲವಾರು ಜನ ಕೆಲಸ ಕಳೆದುಕೊಂಡಿದ್ದು, ದಿನ ಕೂಲಿ ಕಾರ್ಮಿಕರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ.

ಇನ್ನುಸಿನಿಮಾರಂಗ ಕೂಡ ಸಂಪೂರ್ಣವಾಗಿ ಮುಚ್ಚಿರುವುದರಿಂದ ಅಲ್ಲಿ ಕೆಲಸ ಮಾಡಿಕೊಂಡಿದ್ದ ಸಾವಿರಾರು ದಿನಗೂಲಿ ಸಿನಿಮಾ ಕಾಮಿಕರ ಬದುಕು ಕಷ್ಟದಲ್ಲಿದೆ. ಇದೀಗ ರಿಯಲನ್ಸ್ ಸಂಸ್ಥೆ ಅವರ ಕಷ್ಟಕ್ಕೆ ಸ್ಪಂದಿಸಿದ್ದು, ಸುಮಾರು 6 ಸಾವಿರ ಸಿನಿಕಾರ್ಮಿಕರಿಗೆ ರಿಲಯನ್ಸ್ ಫೌಂಡೇಷನ್‌ನಿಂದ ಸಹಾಯ ಮಾಡುತ್ತಿದೆ ಎನ್ನಲಾಗಿದೆ.

ಮುಖೇಶ್‌ ಅಂಬಾನಿ ಅವರ ರಿಲಯನ್ಸ್‌ ಫೌಂಡೇಷನ್‌ ಕರ್ನಾಟಕದಲ್ಲಿರುವ ಸುಮಾರು 6 ಸಾವಿರ ಸಿನಿಕಾರ್ಮಿಕರ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡುವುದರ ಜೊತೆಗೆ ದಿನಸಿ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಸುಮಾರು 2 ಕೋಟಿ ರೂ.ಗಳಷ್ಟು ವ್ಯಯಿಸಲಾಗುತ್ತಿದೆ