ಕೆಎನ್​ಎನ್​ ಡಿಜಿಟಲ್​ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಜೀವನಶೈಲಿ, ಒತ್ತಡ, ಆಹಾರ ಪದ್ಧತಿ ಕೂಡ ಕಾರಣವಾಗುತ್ತದೆ. ಆದರೆ ನಾವು ಸೇವಿಸುವ ಆಹಾರದಲ್ಲಿ ಕೊಂಚ ಎಚ್ಚರಿಕೆ ವಹಿಸಿದರೆ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದು.

BIGG NEWS : `PSI’ ಹಗರಣ : ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ : ಆರೋಗ್ಯ ಸಚಿವ ಸುಧಾಕರ್

ಹೆಚ್ಚಿನ ಪೌಷ್ಟಿಕಾಂಶ ಸೇವನೆಯು ಉತ್ತಮ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದರೆ ಕೆಲವು ಆಹಾರ ಪದಾರ್ಥಗಳು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇವುಗಳ ಕುರಿತಾದ ಮಾಹಿತಿ ಇಲ್ಲಿದೆ.

ಜಂಕ್ ಫುಡ್
ಎಲ್ಲಾ ಜಂಕ್ ಫುಡ್ ಸ್ಯಾಚುರೇಟೆಡ್ ಮತ್ತು ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಅದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಹೆಚ್ಚಾಗಿ ಸ್ರೀಟ್​ ಫುಡ್​ಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಉತ್ತಮ.

ಮೊಟ್ಟೆಯ ಬಿಳಿ ಭಾಗ
ಮೊಟ್ಟೆಗಳು ಕೂದಲಿಗೆ ತುಂಬಾ ಒಳ್ಳೆಯದು. ಆದರೆ ಅವುಗಳನ್ನು ಹಸಿಯಾಗಿ ತಿನ್ನಬಾರದು, ಹಸಿ ಮೊಟ್ಟೆಯ ಬಿಳಿ ಭಾಗವು ಬಯೋಟಿನ್ ಕೊರತೆಯನ್ನು ಉಂಟುಮಾಡಬಹುದು.

ಮೀನು
ಮೀನಿನಲ್ಲಿ ಕಂಡುಬರುವ ಪಾದರಸವು ಹಠಾತ್ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಕತ್ತಿಮೀನು, ಮ್ಯಾಕೆರೆಲ್, ಶಾರ್ಕ್ ಮತ್ತು ಕೆಲವು ವಿಧದ ಟ್ಯೂನ ಮೀನುಗಳು ಪಾದರಸವನ್ನು ಹೊಂದಿರುತ್ತವೆ. ಆದ್ದರಿಂದ ಅವುಗಳನ್ನು ಸೇವಿಸಬಾರದಿರುವುದು ಒಳಿತು.

ಸಕ್ಕರೆ
ಸಕ್ಕರೆಯು ನಿಮ್ಮ ಕೂದಲಿಗೆ ಹಾನಿಕಾರಕವಾಗಿದೆ. ಹೆಚ್ಚು ಸಕ್ಕರೆ ಸೇವನೆಯು ನಿಮ್ಮ ಕೂದಲನ್ನು ಹಾನಿಗೊಳಿಸುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ ಬೋಳು ಉಂಟಾಗುತ್ತದೆ.

SHOCKING NEWS : ಗಣಿ ಜಿಲ್ಲೆಯಲ್ಲಿ ʻ ಘನಘೋರ ʼ ಘಟನೆ ಬೆಳಕಿಗೆ : ಮಹಿಳೆಯ ಪ್ರಾಣ ಹಿಂಡಿದ ʻ ಬುರ್ಖಾ ʼ

Share.
Exit mobile version