ಹೈದರಾಬಾದ್ ಸನ್ ರೈಸರ್ಸ್ ಗೆ 164 ರನ್ ಗಳ ಗೆಲುವಿನ ಗುರಿ ನೀಡಿದ RCB – Kannada News Now


India Sports

ಹೈದರಾಬಾದ್ ಸನ್ ರೈಸರ್ಸ್ ಗೆ 164 ರನ್ ಗಳ ಗೆಲುವಿನ ಗುರಿ ನೀಡಿದ RCB

ದುಬೈ  : ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಐಪಿಎಲ್ 2020ರ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್  ತಂಡ ಬೌಲಿಂಗ್ ಆಯ್ದುಕೊಂಡಿದೆ.

ಬ್ಯಾಟಿಂಗ್​ಗೆ ಇಳಿದಿದ್ದ ಆರ್​​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಓಪನಿಂಗ್ ಬ್ಯಾಟ್ಸ್ ಮನ್ ಗಳು  6 ಓವರ್​ನಲ್ಲಿ 53 ರನ್ ಪೇರಿಸಿದ್ದಾರೆ.  ಪಡಿಕ್ಕಲ್ 36 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ ಐಪಿಎಲ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದರು. ಆರನ್ ಫಿಂಚ್ 27 ಬಾಲ್ ಗಳಿಗೆ 29 ರನ್ ಗಳಿಸಿದ್ರೆ, ಕೊಹ್ಲಿ 14 ರನ್ ಗಳಿಸಿ ಔಟಾದರು.

ಎಬಿ ಡೆವಿಲಿಯರ್ಸ್ 30 ಬಾಲ್ ಗಳಿಗೆ 51 ರನ್ ಪೇರಿಸಿ ಔಟಾದ್ರೆ, ಶಿವಮ್ ದುಬೆ 7 ರನ್ ಪೇರಿಸಿದರು. ಆರ್ ಸಿಬಿ ಕೊನೆಗೆ 163 ರನ್  ಮಾತ್ರ ಗಳಿಸಿತು.

ಮೆಟ್ರೋ ಪ್ರಯಾಣಿಕರಿಗೆ ʼಸಿಹಿ ಸುದ್ಧಿʼ: ʼಸ್ಮಾರ್ಟ್ ಕಾರ್ಡ್‌ʼಗಳ ಅವಧಿ 10 ವರ್ಷ ಹೆಚ್ಚಳ..!
error: Content is protected !!