ಸುಭಾಷಿತ :

Wednesday, January 29 , 2020 9:36 PM

‘NEFT ಮೂಲಕ ಹಣ ವರ್ಗಾವಣೆ’ ಮಾಡುವವರಿಗೆ ಸಿಹಿ ಸುದ್ದಿ : ‘ಡಿ.16ರಿಂದ 24 ಗಂಟೆ’ ಬಳಕೆಗೆ ಲಭ್ಯ


Saturday, December 7th, 2019 5:45 pm

ನವದೆಹಲಿ : ಗೂಗಲ್ ಪೇ, ಪೋನ್ ಪೇ ಸೇರಿದಂತೆ ಅನೇಕ ಆಪ್ ಗಳ ಮೂಲಕ ಈಗಾಗಲೇ ಬ್ಯಾಂಕ್ ಅಕೌಂಟ್ ಹೊಂದಿರುವವರು ಹಣ ವರ್ಗಾವಣೆ ಮಾಡಲಾಗುತ್ತಿದೆ. ಆದ್ರೇ ಇದ್ಯಾವುದನ್ನು ಬಳಕೆ ಮಾಡದೇ ಕೇವಲ ಎನ್ ಇ ಎಫ್ ಟಿ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದವರಿಗೆ ಇದುವರೆಗೆ ಕೇವಲ ಬ್ಯಾಂಕ್ ವ್ಯವಹಾರ ಸಮಯದಲ್ಲಿ ಮಾತ್ರ ಬಳಕೆ ಮಾಡಬಹುದಾಗಿತ್ತು. ಇಂತಹ ಬಳಕೆದಾರರಿಗೆ ಡಿಸೆಂಬರ್ 16ರಿಂದ 24 ಗಂಟೆಯೂ ಈ ಸೌಲಭ್ಯ ದೊರೆಯಲಿದೆ ಎಂಬುದಾಗಿ ಆರ್ ಬಿ ಐ ಸಿಹಿ ಸುದ್ದಿಯನ್ನು ನೀಡಿದೆ.

ಹೌದು… ಡಿಸೆಂಬರ್ 16ರ ಬೆಳಿಗ್ಗೆಯಿಂದಲೇ ಎನ್ ಇ ಎಫ್ ಟಿ ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯ ವಾರದ ಏಳು ದಿನಗಳಲ್ಲಿ 24 ಗಂಟೆಯಲ್ಲೂ ದೊರೆಯಲಿದೆ. ಈ ಕುರಿತಂತೆ ಆರ್ ಬಿ ಐ ನಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಡಿಸೆಂಬರ್ 16ರ ನಂತ್ರ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್ (ಎಲ್ ಇ ಎಫ್ ಟಿ) ಸೌಲಭ್ಯ ಬ್ಯಾಂಕ್ ಅಕೌಂಟ್ ಬಳಕೆದಾರರಿಗೆ ದಿನದ 24 ಗಂಟೆಯಲ್ಲೂ ಲಭ್ಯವಾಗಲಿದೆ ಎಂಬುದಾಗಿ ತಿಳಿಸಿದೆ.

ಅಂದಹಾಗೇ ಈ ಮೊದಲು ಇಂತಹ ಸೌಲಭ್ಯ ಬ್ಯಾಂಕ್ ವ್ಯವಹಾರದ ವೇಳೆಯಲ್ಲಿ ಮಾತ್ರ ಸಾಧ್ಯವಾಗುತ್ತಿತ್ತು. ಬ್ಯಾಂಕ್ ವ್ಯವಹಾರದ ನಂತ್ರ ಎನ್ ಇ ಎಫ್ ಟಿ ಸೌಲಭ್ಯದ ಮೂಲಕ ಇತರೆ ಖಾತೆದಾರರ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಮಸ್ಯೆಗೆ ಇತಿಶ್ರೀ ಹಾಡಿರುವ ಆರ್ ಬಿ ಐ ಡಿಸೆಂಬರ್ 16ರಿಂದ ವಾರದ ಎಲ್ಲಾ ದಿನಗಳು, 24 ಗಂಟೆಯಲ್ಲಿ ನೀವು ಯಾವಾಗ ಬೇಕಾದ್ರೂ ಎನ್ ಇ ಎಫ್ ಟಿ ಮೂಲಕ ಹಣ ವರ್ಗಾವಣೆ ವ್ಯವಹಾರ ನಡೆಸಲು ಅವಕಾಶ ಮಾಡಿಕೊಟ್ಟು, ಸಿಹಿ ಸುದ್ದಿಯನ್ನು ನೀಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions