ನವದೆಹಲಿ: ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ( Commonwealth Games 2022 ) ಭಾರತದ ಪದಕದ ಬೇಟೆ ಮುಂದುವರೆದಿದೆ. 9ನೇ ದಿನವಾದಂತ ಇಂದು ಕುಸ್ತಿಯಲ್ಲಿ ಭಾರತದ ರವಿ ಕುಮಾರ್ ದಹಿಯಾ ( Ravi Kumar Dahiya ) ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ.

Railway Jobs : ಉದ್ಯೋಗ ನಿರೀಕ್ಷಿತರಿಗೆ ಗುಡ್‌ ನ್ಯೂಸ್‌ : ‘1.4 ಲಕ್ಷ ಹುದ್ದೆ’ಗಳ ಭರ್ತಿಗೆ ಮುಂದಾದ ಭಾರತೀಯ ರೈಲ್ವೆ

ಭಾರತದ ರವಿ ಕುಮಾರ್ ದಹಿಯಾ 10-0 (ತಾಂತ್ರಿಕ ಶ್ರೇಷ್ಠತೆ) ನೈಜೀರಿಯಾದ ಎಬಿಕೆವೆನಿಮೊ ವೆಲ್ಸನ್ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕುಸ್ತಿಯಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನ ಇದಾಗಿದೆ.

ಮತ್ತೊಂದೆಡೆ ಮಹಿಳಾ ಕುಸ್ತಿ 50 ಕೆಜಿ ಫ್ರೀಸ್ಟೈಲ್ನಲ್ಲಿ ಪೂಜಾ ಗೆಹ್ಲೋಟ್ 12-2 ರಿಂದ ಸ್ಕಾಟ್ಲೆಂಡ್ನ ಕ್ರಿಸ್ಟೆಲ್ ಲೆಮೊಫಾಕ್ ಲೆಟ್ಚಿಡ್ಜಿಯೊ ಅವರನ್ನು ಸೋಲಿಸಿದರು. ಇದರೊಂದಿಗೆ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.

ನನ್ನ ಕಂಡ್ರೇ.. ಬಿಜೆಪಿಯವರಿಗೆ ಭಯವೋ ಭಯ – ಮಾಜಿ ಸಿಎಂ ಸಿದ್ಧರಾಮಯ್ಯ

Share.
Exit mobile version