ಸುಭಾಷಿತ :

Monday, March 30 , 2020 11:55 AM

ಪಡಿತರ ಚೀಟಿದಾರರೇ, ಸೈಬರ್ ಸೆಂಟರ್ ಮಾಲೀಕರೇ ಎಚ್ಚರ..! ‘ಸ್ಮಾರ್ಟ್ ರೇಷನ್ ಕಾರ್ಡ್’ಬಗ್ಗೆ ತಪ್ಪದೇ ಈ ಸುದ್ದಿ ಓದಿ.!


Wednesday, January 29th, 2020 12:18 pm

ಬೆಂಗಳೂರು : ಕೇಂದ್ರ ಸರ್ಕಾರ ಓನ್ ನೇಷನ್ ಓನ್  ಕಾರ್ಡ್ ಯೋಜನೆಯ ಮೂಲಕ, ಇಡೀ ದೇಶದಲ್ಲಿಯೇ ಏಕ ರೂಪದ ಪಡಿತರ ಚೀಟಿ ಜಾರಿಗೆ ತರುವುದಾಗಿ ಘೋಷಣೆ ಮಾಡಿತ್ತು. ಈ ನಿಟ್ಟಿನಲ್ಲಿ ಈಗಾಗಲೇ ಸಕ್ರೀಯ ಕೂಡ ಆಗಿದೆ. ಆದ್ರೇ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಕ್ತಿಗಳು, ಇಂತಹ ಕಾರ್ಡ್ ವಿತರಿಸುತ್ತೇವೆ. ಈ ಕಾರ್ಡ್ ವಿತರಿಸಲು ನಿಮಗೆ ಪ್ರಾಂಚೈಸಿ ಕೊಡುತ್ತೇವೆ. ಹಾಗೇ ಹೀಗೆ ಅಂತ ಹೇಳಿ ಪ್ರತಿ ಕಾರ್ಡ್ ಗೆ ರೂ.260 ವಸೂಲಿಗೆ ಇಳಿದಿದೆ. ಅದು ನಕಲಿ ಕಾರ್ಡ್, ನಕಲಿ ಆದೇಶ ಪತ್ರ ನೀಡುವ ಮೂಲಕ. ಹೀಗಾಗಿ ಪಡಿತರ ಚೀಟಿದಾರರು, ಸೈಬರ್ ಸೆಂಟರ್ ಮಾಲೀಕರು ಇದೀಗ ಎಚ್ಚರಿಕೆ ವಹಿಸುವ ಅವಶ್ಯಕೆ ಇದೆ.

ಹೌದು.. ಇಂತಹ ಮೋಸ ಮಾಡುವ, ಸಾರ್ವಜನಿಕರಿಗೆ, ಸೈಬರ್ ಸೆಂಟರ್ ನವರಿಗೆ ಟೋಪಿ ಹಾಕುವ ಜಾಲವೊಂದು ಇದೀಗ ಸಕ್ರೀಯವಾಗಿದೆ. ಈ ಮೂಲಕ ಪ್ರತಿ ಕಾರ್ಡ್ ಒಂದಕ್ಕೆ ರೂ.260 ಪಡೆದು, ಮೋಸ ಮಾಡಿ, ನಕಲಿ ದಾಖಲೆ ನೀಡುತ್ತಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಮೂಡಿಸುವಂತ ಕೆಲಸವನ್ನು ನಮ್ಮ ಕನ್ನಡ ನ್ಯೂಸ್ ನೌ ವೆಬ್ ಪೊರ್ಟಲ್ ಮಾಡುತ್ತಿದೆ.

ಕೇಂದ್ರ ಸರ್ಕಾರ ಪಡಿತರ ಚೀಟಿಗಳನ್ನು ಸ್ಮಾರ್ಟ್ ಕಾರ್ಡ್ ಮೂಲಕ ನೀಡಲು ಮುಂದಾಗಿದೆ. ಆದ್ರೇ ಇಂತಹ ಕಾರ್ಡ್ ವಿತರಿಸಲು ಯಾವುದೇ ಕಂಪನಿಯೊಂದಿಗೆ ರಾಜ್ಯ, ಕೇಂದ್ರ ಸರ್ಕಾರ ಮಾಡಿಕೊಂಡಿಲ್ಲ. ಆದ್ರೇ ಕಾರ್ಡ್ ಟೆಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಎನ್ನುವಂತ ಕಂಪನಿಯೊಂದು, ಏಕರೂಪದ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಿಮಗೆ ಕಾರ್ಡ್ ವಿತರಣೆಗೆ ಪ್ರಾಂಜೈಸಿ ನೀಡುತ್ತೇವೆ ಎಂಬುದಾಗಿ ಸಾರ್ವಜನಿಕರನ್ನು ನಂಬಿಸಿ ಮೋಸಗೊಳಿಸುತ್ತಿರುವುದಾಗಿ ತಿಳಿದು ಬಂದಿದೆ.

ಸ್ಥಳೀಯವಾಗಿ ಕಾರ್ಡ್ ಮಾಡಿಕೊಡು ಆರ್ಡರ್ ನಿಮಗೆ ಕೊಡುತ್ತೇವೆ. ಇದಕ್ಕಾಗಿ ಪ್ರತಿ ಕಾರ್ಡ್ ಗೆ ರೂ.260 ನೀವು ನೀಡಬೇಕು ಎಂಬುದಾಗಿ ನಂಬಿಸಿ, ಮುಂಗಡವಾಗಿ ಒಂದಷ್ಟ ಹಣ ಪೀಕುತ್ತಿರುವ ಕಂಪನಿ, ಕೇಂದ್ರ ಸರ್ಕಾರ ಕಳುಹಿಸಿರುವ ಸುತ್ತೋಲೆಯನ್ನೇ ನಕಲು ಮಾಡಿ, ಕೇಂದ್ರ ಸರ್ಕಾರ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಲೋಗೋ ಬಳಸಿಕೊಂಡು ಆದೇಶ ಪತ್ರವನ್ನು ನೀಡುತ್ತಿದೆ.

ಅಲ್ಲದೇ ಕಾರ್ಡ್ ಟೆಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಂತ ನಕಲಿ ಪತ್ರ ತೋರಿಸಿ, ನಕಲಿ ಸ್ಮಾರ್ಟ್ ಕಾರ್ಡ್ ತೋರಿಸಿ ಮುಂಗಡ ಹಣ ಕಟ್ಟಿಸಿಕೊಂಡು ವಂಚಿಸುತ್ತಿದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಂತಹ ನಕಲಿ ಕಂಪನಿಯವರು ಬಂದು, ಕಾರ್ಡ್ ಮಾಡಿಕೊಡುವ ಅವಕಾಶ ನೀಡುತ್ತೇವೆ ಎಂದು ಟೋಪಿ ಹಾಕುತ್ತಿದೆ. ಈ ಬಗ್ಗೆ ತಪ್ಪದೇ ಎಚ್ಚರಿಕೆ ವಹಿಸಿ, ಹುಷಾರಾಗಿರಿ ಎಂಬುದು ನಮ್ಮ ಕಳಕಳಿಯ ಮನವಿ ಆಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions