ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗರವಾರದಂದು ಪಿಎಂ ಕೇರ್ಸ್ ನಿಧಿಯ ಟ್ರಸ್ಟಿಗಳ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ 4345 ಮಕ್ಕಳನ್ನು ಪೋಷಿಸುತ್ತಿರುವ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಸೇರಿದಂತೆ ಪಿಎಂ ಕೇರ್ಸ್ ಫಂಡ್ ಸಹಾಯದಿಂದ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ದೇಶಕ್ಕೆ ನಿರ್ಣಾಯಕ ಸಮಯದಲ್ಲಿ ನಿಧಿಯು ನಿರ್ವಹಿಸಿದ ಪಾತ್ರವನ್ನು ಟ್ರಸ್ಟಿಗಳು ಶ್ಲಾಘಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ನಿಧಿಗೆ ಹೃತ್ಪೂರ್ವಕವಾಗಿ ಕೊಡುಗೆ ನೀಡಿದ್ದಕ್ಕಾಗಿ ದೇಶದ ಜನತೆಯನ್ನು ಶ್ಲಾಘಿಸಿದರು.

ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎಮೆರಿಟಸ್ ರತನ್ ಟಾಟಾ, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಕೆ.ಟಿ.ಥಾಮಸ್ ಮತ್ತು ಮಾಜಿ ಉಪ ಲೋಕಸಭಾ ಸ್ಪೀಕರ್ ಕರಿಯಾ ಮುಂಡಾ ಸೇರಿದಂತೆ ಗಣ್ಯ ವ್ಯಕ್ತಿಗಳನ್ನು ಪಿಎಂ ಕೇರ್ಸ್ ನಿಧಿಯ ಟ್ರಸ್ಟಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಸರ್ಕಾರ ಬುಧವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಈ ಸಭೆಯಲ್ಲಿ ಪಿಎಂ ಕೇರ್ಸ್ ಫಂಡ್ನ ಟ್ರಸ್ಟಿಗಳು, ಅಂದರೆ ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಹಣಕಾಸು ಸಚಿವರು ಮತ್ತು ಪಿಎಂ ಕೇರ್ಸ್ ಫಂಡ್ನ ಹೊಸದಾಗಿ ನಾಮನಿರ್ದೇಶನಗೊಂಡ ಟ್ರಸ್ಟಿಗಳು ಭಾಗವಹಿಸಿದ್ದರು ಅದರ ವಿವರ ಹೀಗಿದೆ

  • ಕೆ.ಟಿ. ಥಾಮಸ್, ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರು,
  • ಕರಿಯ ಮುಂಡಾ, ಮಾಜಿ ಉಪಸಭಾಧ್ಯಕ್ಷರು,
  •  ರತನ್ ಟಾಟಾ, ಅಧ್ಯಕ್ಷ ಎಮೆರಿಟಸ್, ಟಾಟಾ ಸನ್ಸ್.
  • ಪಿಎಂ ಕೇರ್ಸ್ ನಿಧಿಗೆ ಸಲಹಾ ಮಂಡಳಿಯನ್ನು ರಚಿಸಲು ಈ ಕೆಳಗಿನ ಗಣ್ಯ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ಟ್ರಸ್ಟ್ ನಿರ್ಧರಿಸಿದೆ:
  • ರಾಜವ್ ಮೆಹರ್ಷಿ, ಭಾರತದ ಮಾಜಿ ನಿಯಂತ್ರಕ ಮತ್ತು ಲೆಕ್ಕ ಪರಿಶೋಧಕರು
  • ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್ ನ ಮಾಜಿ ಅಧ್ಯಕ್ಷರು
  • ಟೀಚ್ ಫಾರ್ ಇಂಡಿಯಾದ ಸಹ-ಸ್ಥಾಪಕ ಮತ್ತು ಇಂಡಿಕಾರ್ಪ್ಸ್ ಮತ್ತು ಪಿರಾಮಲ್ ಫೌಂಡೇಶನ್ ನ ಮಾಜಿ ಸಿಇಒ ಶ್ರೀ ಆನಂದ್ ಷಾ

BIGG NEWS : ಮುರುಘಾಶ್ರೀಗಳಿಗೆ ಹೃದಯ ಸಮಸ್ಯೆ : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಕೋರ್ಟ್ ಸೂಚನೆ

BIGG NEWS : ಮಂಗಳೂರಿನಲ್ಲಿ ಹಾಸ್ಟೆಲ್​ ಕಿಟಕಿ ಮುರಿದು ಮೂವರು ವಿದ್ಯಾರ್ಥಿನಿಯರು ಎಸ್ಕೇಪ್‌ : ಪೊಲೀಸರ ಹುಡುಕಾಟ

Share.
Exit mobile version