ಹೈದರಾಬಾದ್:ನಟಿ ರಶ್ಮಿಕಾ ಒಂದಲ್ಲಾ ಒಂದು ಕಾರಣದಿಂದಾಗಿ ಸುದ್ದಿಯಾಗುತ್ತಿರುತ್ತಾರೆ.ಸದ್ಯ ಬಾಲಿವುಡ್ ನ ಅನಿಮಲ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.ಇತ್ತೀಚೆಗೆ ತಮ್ಮ ಸಹಾಯಕ ಸಾಯಿಬಾಬುವಿನ ಮದುವೆಗೆ ಹೋದಾಗ ನವ ದಂಪತಿಗಳು ರಶ್ಮಿಕಾರ ಕಾಲಿಗೆ ಬಿದ್ದಿದ್ದಾರೆ.ಆ ಕ್ಷಣದಲ್ಲಿ ಏನು ಮಾಡಲು ತೋಚದೆ ರಶ್ಮಿಕಾ ಅವರಿಗೆ ಕೈ ಮುಗಿದು ನಮಸ್ಕರಿಸಿದ್ದಾರೆ.ಈ ವೀಡಿಯೋ ಸದ್ಯ ವೈರಲ್ ಆಗಿದೆ.
ರಶ್ಮಿಕಾ ಪುಷ್ಪಾ 2 ಚಿತ್ರದ ಬಿಡುಗಡೆಗೆ ಕಾಯುತ್ತಿದ್ದು ಅವರ ಯಶಸ್ಸು ಮತ್ತಷ್ಟು ಚಿತ್ರಗಳಲ್ಲಿ ನಟಿಸಲು ಸಹಾಯಕವಾಗುತ್ತದೆ. ಈಗಾಗಲೇ ತಮಿಳಿನಲ್ಲೂ ರಶ್ಮಿಕಾ ನಟಿಸಿದ್ದಾರೆ.ಬಾಲಿವುಡ್ ನಟ ಶಾಹಿದ್ ಕಪೂರ್ ಜೊತೆ ನಟಿಸಲು ಸಮಯದ ಹೊಂದಾಣಿಕೆಯಿಂದಾಗಿ ಸಾಧ್ಯವಾಗಾಲಿಲ್ಲ. ಹಿಂದಿಯಲ್ಲಿ ಮೊದಲ ಚಿತ್ರ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ.
Rushie today at Hyderabad, as she attends her Assistant Sai Babu’s wedding !! How Innocent She is… 🥺🩷#RashmikaMandanna @iamRashmikapic.twitter.com/kkDManWzBr
— Roвιɴ Roвerт (@PeaceBrwVJ) September 3, 2023