ಸುಭಾಷಿತ :

Monday, March 30 , 2020 11:55 PM

ನಟಿ ರಶ್ಮಿಕಾ ಪೋಸ್ಟ್ ಗೆ ಅಸಭ್ಯ ಕಮೆಂಟ್ -ನೆಟ್ಟಿಗರಿಂದ ಕ್ಲಾಸ್ : ಜಿಲ್ಲಾಧಿಕಾರಿ ಸ್ಪಷ್ಟನೆ…!


Thursday, February 20th, 2020 7:46 pm

ಸಿನಿಮಾ ಡೆಸ್ಕ್ :  ನಟಿ ರಶ್ಮಿಕಾ ಮಂದಣ್ಣ ಅವರ ಪೋಸ್ಟ್ ಗೆ ತೆಲಂಗಾಣ ಜಿಲ್ಲಾಧಿಕಾರಿ ಜಗಿತ್ಯಾಲ ಅಸಭ್ಯ ಕಮೆಂಟ್ ಮಾಡಿದ್ದು, ಜಿಲ್ಲಾಧಿಕಾರಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಹೌದು, ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಕಾರ್ಯಕ್ರಮವೊಂದಕ್ಕೆ ಹಸಿರು ಬಣ್ಣದ ಸ್ಲಿಟ್ ಗೌನ್ ಧರಿಸಿಕೊಂಡು ಹೋಗಿದ್ದರು. ಈ ಕಾರ್ಯಕ್ರಮಕ್ಕೆ ಧರಿಸಿದ ಉಡುಪಿನಲ್ಲಿ ರಶ್ಮಿಕಾ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ರಶ್ಮಿಕಾ ಪೋಸ್ಟ್ ಗೆ ತೆಲಂಗಾಣ ಜಿಲ್ಲಾಧಿಕಾರಿ ಜಗಿತ್ಯಾಲ ಅಸಭ್ಯ ಕಮೆಂಟ್ ಮಾಡಿದ್ದರು. ಇದರಿಂದ ಗರಂ ಆದ ನೆಟ್ಟಿಗರು ಇಂತಹ ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಕಮೆಂಟ್ ಮಾಡುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಷಯ ದೊಡ್ಡದಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ರವಿ ; ನನ್ನ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ, ಯಾರೋ ಕಿಡಿಕೇಡಿಗಳು ಈ ತರ ಕಮೆಂಟ್ ಮಾಡಿದ್ದಾರೆ, ಈ ಬಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions