And she said Yes… ರಾನಾ ದಗ್ಗುಬಾಟಿ ತಮ್ಮ ಸಂಗಾತಿಯನ್ನು ಪರಿಚಯಿಸಿದ್ದು ಹೀಗೆ… – Kannada News Now


Film Other Film

And she said Yes… ರಾನಾ ದಗ್ಗುಬಾಟಿ ತಮ್ಮ ಸಂಗಾತಿಯನ್ನು ಪರಿಚಯಿಸಿದ್ದು ಹೀಗೆ…

ಸಿನಿಮಾ ಡೆಸ್ಕ್ : ತಮ್ಮ ಮುಂಬರುವ ಚಿತ್ರ ಕಾಡಾನ್ ಬಿಡುಗಡೆಗಾಗಿ ಕಾಯುತ್ತಿರುವ ಟಾಲಿವುಡ್ ನ ಜನಪ್ರಿಯ ನಟ ರಾನಾ ದಗ್ಗುಬಾಟಿ ತಮ್ಮ ಸಂಗಾತಿಯ ಫೋಟೋವನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂಗಾತಿಯನ್ನು ಪರಿಚಯಿಸಿದ್ದಾರೆ.

ಹೌದು ತೆಲುಗಿನ ಹ್ಯಾಂಡ್ಸಮ್ ನಟ ರಾನಾ ಇಂದು ಗೆಳತಿ ಮಿಹೀಕಾ ಬಜಾಜ್ ಅವರನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದಾರೆ.And she said Yes ಎಂಬ ಶೀರ್ಷಿಕೆಯೊಂದಿಗೆ ರಾನಾ ಮಿಹಿಕಾ ಜೊತೆಗಿನ ಮುದ್ದಾದ ಫೊಟೋವನ್ನು ಶೇರ್ ಮಾಡಿದ್ದಾರೆ.

ಎನ್‌ಟಿಆರ್ ಕಥಾನಾಯಕುಡು ನಟ ತನ್ನ ಗೆಳತಿಗೆ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಮುಂದಿಟ್ಟು, ನಂತರ ಆಕೆ ಯೆಸ್ ಎಂದಳು ಎಂದು ಬರೆದುಕೊಂಡಿದ್ದಾರೆ.

ಅವರು ಫೋಟೋವನ್ನು ಪೋಸ್ಟ್ ಮಾಡಿದ ತಕ್ಷಣ, ಚಿತ್ರ ರಂಗದ ಮಿತ್ರರು, ಸಹೋದ್ಯೋಗಿಗಳು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಶ್ರುತಿ ಹಾಸನ್, ಸಮಂತಾ ಅಕ್ಕಿನೇನಿ ಮತ್ತು ಹನ್ಸಿಕಾ, ದುಲ್ಖರ್ ಸಲ್ಮಾನ್,ಅನಿಲ್ ಕಪೂರ್, ಅಲ್ಲ್ಲು ಶಿರಿಸ್ ಸೇರಿ ಹಲವರು ರಾನಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಿಹೀಕಾ ಬಜಾಜ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಡ್ಯೂ ಡ್ರಾಪ್ ಡಿಸೈನ್ ಸ್ಟುಡಿಯೋದ ಸ್ಥಾಪಕರಾಗಿದ್ದಾರೆ. ವರದಿಗಳ ಪ್ರಕಾರ, ಮುಂಬೈ ಮೂಲದ ಮಿಹೀಕಾ ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದಿದ್ದಾರೆ ಎಂದು ತಿಳಿದು ಬಂದಿದೆ.