ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣ ಬಗ್ಗೆ ಈಗ ಎನ್ಐಎ ಅಧಿಕಾರಿಗಳು ಮಹತ್ವದ ಸುಳಿವು ಪತ್ತೆ ಹಚ್ಚಿದ್ದಾರೆ. ಸತತ 6 ದಿನಗಳ ಬಳಿಕ ಬಾಂಬ್ ಬಟ್ಟೆ ಬದಲಿಸಿ ಟೋಬಿ ಬಿಟ್ಟು, ತನ್ನ ಮುಖ ಚಹರೆಯನ್ನು ಸಂಪೂರ್ಣವಾಗಿ ತೋರುವಂತೆ ತೆರಳಿರೋ ವೀಡಿಯೋ ದೃಶ್ಯಾವಳಿಗಳನ್ನು ಪತ್ತೆ ಹಚ್ಚಿದ್ದಾರೆ.

ಮಾಹಿತಿ ಪ್ರಕಾರ ರಾಮೇಶ್ವರಂ ಕೆಫೆಯಲ್ಲಿ ಟೈಮರ್‌ ಇಟ್ಟ ಆರೋಪಿ, ಹೂಡಿಯ ಮಸೀದಿ ಬಳಿ ಬಟ್ಟೆ ಬದಲಿಸಿ ಟೋಪಿ ಬಿಟ್ಟು ಹೋಗಿದ್ದಾನೆ. ಬಾಂಬರ್ ಧರಿಸಿದ್ದ ಟೋಪಿಯನ್ನ ಪೊಲೀಸರು ಸೀಜ್ ಮಾಡಿದ್ದಾರೆ. ಈ ಮೂಲಕ ಮಹತ್ವದ ಸುಳಿವನ್ನು ಬಾಂಬರ್ ಬಗ್ಗೆ ಸಿಸಿಬಿ ಹಾಗೂ ಎನ್ಎಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ರಾಮೇಶ್ವರಂ ಕೆಫೆ ಸ್ಪೋಟ ಸಂಬಂಧ ಹಲವು ವಿಧಾನಗಳಲ್ಲಿ ಎನ್ಐಎ ತನಿಖೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿದ ಮಾಹಿತಿಯನ್ನು ಪತ್ತೆ ಹಚ್ಚಿದ ಬಳಿಕ, ಆತ ಅಲ್ಲಿಂದ ಮುಂದೆ ಹೋಗಿದ್ದೆಲ್ಲಿಗೆ ಎನ್ನುವ ಮಾಹಿತಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪತ್ತೆ ಹಚ್ಚಿದ್ದಾರೆ.

ಹತ್ತಾರು ಬಿಎಂಟಿಸಿ ಬಸ್‌ಗಳಲ್ಲಿ ಟೋಪಿವಾಲ ಓಡಾಡಿರುವ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ಕೇವಲ ಬಸ್ ಅಷ್ಟೇ ಅಲ್ಲ ಹೂಡಿ ಬಳಿಯ ಮಸೀದಿಯೊಂದರ‌ ಬಳಿ ಬಟ್ಟೆ ಕೂಡ ಬದಲಿಸಿ ಬೇರೆ ಬಟ್ಟೆ ಧರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎನ್ನುವ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಜೊತೆಗೆ ಟೋಪಿಯನ್ನು ಅಲ್ಲಿಯೇ ಬಿಟ್ಟು ಹೋಗಿರೋದಾಗಿ ಪತ್ತೆ ಮಾಡಿದ್ದಾರೆ.

‘ಪುನೀತ್ ರಾಜಕುಮಾರ್’ ಹೆಸರಲ್ಲಿ ರಾಜ್ಯಾದ್ಯಂತ ‘ಹೃದಯ ಜ್ಯೋತಿ’ ಯೋಜನೆ ಪ್ರಾರಂಭ : ದಿನೇಶ್ ಗುಂಡೂರಾವ್

ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸತತ 9 ಗಂಟೆ ಪರಿಶೀಲನೆ ನಡೆಸಿದ ‘NIA’

Share.
Exit mobile version