ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಘಟನೆಯಲ್ಲಿ ಗಾಯಗೊಂಡಿದ್ದಂತ ಸ್ವರ್ಣಾಂಭ ಎಂಬುವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೀಗಾಗಿ ಇಂದು ಅವರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಮಾರ್ಚ್.1ರಂದು ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಘಟನೆ ನಡೆದಿತ್ತು. 10 ಮಂದಿ ಗಾಯಗೊಂಡಿದ್ದರು. ಕಳೆದ 17 ದಿನಗಳಿಂದ ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಸ್ವರ್ಣಾಂಭ ಇಂದು ಗುಣಮುಖರಾಗಿದ್ದಾರೆ.

ಈ ಹಿನ್ನಲೆಯಲ್ಲಿ ಬ್ರೂಕ್ ಫೀಲ್ಡ್ ಆಸ್ಪತ್ರೆಯಿಂದ ಗಾಯಾಳು ಸ್ವರ್ಣಾಂಭ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರೋದಾಗಿ ತಿಳಿದು ಬಂದಿದೆ.

ಅಂದಹಾಗೇ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸ್ವರ್ಣಾಭ ಅವರ ಕಣ್ಣು, ಕಿವಿ, ಹೊಟ್ಟೆ ಸೇರಿದಂತೆ ಶೇ.40ರಷ್ಟು ಸುಟ್ಟ ಗಾಯಗಳಾಗಿದ್ದವು. ಹೀಗಾಗಿ ಅವರು ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ಲಾಸ್ಟಿಕ್ ಸರ್ಜರಿ ಬಳಿಕ ಇಂದು ಸಂಜೆ 6 ಗಂಟೆಗೆ ಸ್ವರ್ಣಾಂಭ ಡಿಸ್ಚಾರ್ಜ್ ಆಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

‘ಯತ್ನಾಳ್’ ವಿರುದ್ಧದ ಮಾನನಷ್ಟ ಪ್ರಕರಣ: ‘ಡಿಸಿಎಂ ಡಿಕೆ ಶಿವಕುಮಾರ್’ಗೆ ‘ಹೈಕೋರ್ಟ್’ನಿಂದ ತುರ್ತು ನೋಟಿಸ್

BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು

Share.
Exit mobile version