ಮೈಸೂರು: ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ಇಂದು ನಿಗೂಢ ಸ್ಪೋಟ ಸಂಭವಿಸಿತ್ತು. ಆ ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆ ಕುರಿತಂತೆ ಸಿಎಂ ಸಿದ್ಧರಾಮಯ್ಯ ಏನು ಹೇಳಿದರು ಅಂತ ಮುಂದೆ ಓದಿ.

ಈ ಕುರಿತಂತೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇತ್ತೀಚೆಗೆ ಯಾವತ್ತೂ ಹೀಗೆ ಆಗಿರಲಿಲ್ಲ. ಮಂಗಳೂರು ಬ್ಲಾಸ್ಟ್ ನಂತ್ರ ರಾಜ್ಯದಲ್ಲಿ ಹೀಗೆ ಆಗಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿದ್ದು. ಯಾರು ಮಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ತರದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಆದರೇ ಈ ಘಟನೆ ಸಂಬಂಧ ಎಲ್ಲರೂ ತನಿಖೆಗೆ ಸಹಕರಿಸಬೇಕು. ಹೇಗೆ ಆಗಿದೆ ಎನ್ನುವ ಬಗ್ಗೆ ತನಿಖೆಯಿಂದ ವಿಷಯ ಗೊತ್ತಾಗಬೇಕು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರೊಂದಿಗೆ ಮಾಹಿತಿ ಪಡೆದು ಪ್ರಕರಣದ ತನಿಖೆಯನ್ನು ಯಾವುದರಿಂದ ನಡೆಸಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮಧ್ಯಾಹ್ನ 12 ಗಂಟೆ ವೇಳೆಗೆ ರಾಮೇಶ್ವರಂ ಕಫೆಯಲ್ಲಿ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ನಮ್ಮ ಸರ್ಕಾರ ಅವಧಿಯಲ್ಲಿ ಮೊದಲ ಬಾರಿಗೆ ಹೀಗೆ ಸ್ಪೋಟ ಸಂಭವಿಸಿದೆ. ಪೊಲೀಸರು ಸ್ಥಳದಲ್ಲಿ ತನಿಖೆ ಮಾಡುತ್ತಿದ್ದಾರೆ. ಎಲ್ಲ ಕಾಲದಲ್ಲಿಯೂ ನಡೆಯುತ್ತಿದೆ. ನಡೆಯಬಾರದು ಎಂದು ತಿಳಿಸಿದರು.

8 ಜನರಿಗೆ ಗಾಯವಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತ್ರ ಸ್ಪೋಟಕಕ್ಕೆ ಕಾರಣ ಏನು ಎಂಬುದು ತಿಳಿದು ಬರಲಿದೆ ಎಂದರು.

‘KSRTC, BMTC, KKRTC, NWKRTC’ಗೆ ಪ್ರಶಸ್ತಿಯ ಸರಮಾಲೆ: ‘ಐದು ರಾಷ್ಟ್ರೀಯ ಪ್ರಶಸ್ತಿ’

ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ | Gruha Jyothi Scheme

Share.
Exit mobile version