ಬೆಂಗಳೂರು: ಡಿ.ಕೆ ಶಿವಮಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ನ್ನು ಸಿಡಿಸಿದ್ದರು. ಈ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಮಂತ್ರಿ ಆಗಬೇಕಿತ್ತು, ಅವರ ಪಕ್ಷ ಕೊಟ್ಟಿಲ್ಲ. ಹೀಗಾಗಿ ಅದರಿಂದ ಹತಾಶೆಗೊಂಡು ಹೀಗೆ ಮಾತಾಡುತ್ತಿದ್ದಾರೆ ಎಂದು ಟೀಕಿಸಿದ್ದರು.
ನಗರದಲ್ಲಿ ಮಾತನಾಡಿದ ಅವರು, ಅವರ ಮಾತುಗಳನ್ನು ಕೇಳಿದರೆ ಅಯ್ಯೋ ಅನ್ನಿಸುತ್ತೆ. ರಮೇಶ್ ಜಾರಕಿಹೊಳಿಯನ್ನು ಬಿಜೆಪಿಯವರು ಆಸ್ಪತ್ರೆಗೆ ತೋರಿಸಬೇಕು. ತನಿಖೆ ಮಾಡಿಸಲು ಜಾರಕಿಹೊಳಿಯನ್ನು ಯಾರು ತಡೆದಿದ್ದಾರೆ. ನಾನೇನು ಪ್ರತಿಕ್ರಿಯೆ ಕೊಡಲ್ಲ, ಯಾವ ತನಿಖೆ ಬೇಕಾದ್ರೂ ಮಾಡಲಿ ಎಂದು ವ್ಯಂಗ್ಯವಾಡಿದವರು.
ಇನ್ನು ವಿದೇಶದಲ್ಲಿ ಡಿ.ಕೆ.ಶಿವಕುಮಾರ್ ಫ್ಲ್ಯಾಟ್ ಇದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, 10% ಆದರೂ ಬರುವ ಹಾಗೆ ಮಾಡಿ, ನಾನೇ ಹೋಗಿ ಬರುತ್ತೇನೆ. ಐ ವಿಷ್ ಹಿಮ್ ಆಲ್ ದ ಬೆಸ್ಟ್, ಶುಭವಾಗಲಿ ಯಶಸ್ಸಾಗಲಿ ಎಂದು ಜಾರಕಿಹೊಳಿಗೆ ಟಾಂಗ್ ನೀಡಿದರು.
BIGG NEWS: ಪ್ರಚೋದನಕಾರಿ ಭಾಷಣ ಮಾಡಿದ್ದ ಶರಣ್ ಪಂಪ್ ವೆಲ್ ವಿರುದ್ಧ ‘FIR’ ದಾಖಲು
BIGG NEWS : ಇದು ಚುನಾವಣಾ ಬಜೆಟ್, ರೈತರನ್ನು ಕಡೆಗಣಿಸಲಾಗಿದೆ : ಡಿ.ಕೆ ಶಿವಕುಮಾರ್