ರಾಮಾಯಣದ ವಿಶ್ವ ದಾಖಲೆ : ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮನೋರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆ – Kannada News Now


India

ರಾಮಾಯಣದ ವಿಶ್ವ ದಾಖಲೆ : ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮನೋರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆ

ನವದೆಹಲಿ : ರಮಾನಂದ ಸಾಗರ್ ಅವರ ಸುಪ್ರಸಿದ್ದ ರಾಮಾಯಣ ಧಾರಾವಾಹಿ ಜಗತ್ತಿನ ದೂರದರ್ಶನ ಕ್ಷೇತ್ರದಲ್ಲೇ ಹೆಚ್ಚು ಟಿಆರ್ ಪಿ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಏ.16 ರಂದು 7.7 ಕೋಟಿ ವೀಕ್ಷಕರು ಈ ಕಾರ್ಯಕ್ರಮ ವೀಕ್ಷಿಸುವ ಮೂಲಕ ವಿಶ್ವದಾಖಲೆಯನ್ನೇ ಬರೆದಿದೆ ಎಂದು ದೂರದರ್ಶನ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಸಾರ್ವಜನಿಕರ ಒತ್ತಾಯದ ಮೇರೆಗೆ  ಮಾ.28 ರಿಂದ ರಾಮಾಯಣ ಧಾರಾವಾಹಿಯನ್ನು ದೂರದರ್ಶನದಲ್ಲಿ ಮರುಪ್ರಸಾರ ಮಾಡಲಾಗುತ್ತಿದೆ. ಜನವರಿ 25  1987ರಲ್ಲಿ ಈ ಧಾರಾವಾಹಿ ಡಿಡಿಯಲ್ಲಿ ಪ್ರಸಾರವಾವಾಗಿತ್ತು. ಈ ವೇಳೆಯೂ ರಾಮಾಯಣ ಎಲ್ಲ ದಾಖಲೆಗಳನ್ನು ಸರಿದಟ್ಟುವಲ್ಲಿ ಯಶಸ್ವಿಯಾಗಿತ್ತು. ಈಗ ಮರುಪ್ರಸಾರವಾಗಿದ್ದು,ಈಗಲೂ ರಾಮಾಯಣ ತನ್ನ ಹಿಸ್ಟರಿಯನ್ನು ಮರುಕಳಿಸುವಂತೆ ಮಾಡಿದೆ. ರಮಾನಂದ ಸಾಗರ್ ಅವರು ವಾಲ್ಮೀಕಿ ರಾಮಾಯಣ ಹಾಗೂ ತುಳಸಿದಾಸ್ ಅವರ ರಾಮಚರಿತಮಾನಸ್ ನಆಧರಿಸಿ 78 ಎಪಿಸೋಡ್ ಗಳ ರಾಮಾಯಣವನ್ನು ತೆರೆಮೇಲೆ ತಂದಿದ್ದರು. 1987 ರ ಜನವರಿ 25ರಿಂದ 1988ರ ಜುಲೈ 31 ರವರೆಗೆ ಈ ಧಾರಾವಾಹಿ ಮೊದಲ ಬಾರಿಗೆ ಪ್ರಸಾರವಾಗಿತ್ತು.  ಆ ಬಳಿಕ ಪ್ರತಿ ಭಾನುವಾರ ಬೆಳಗ್ಗೆ 9.30ಕ್ಕೆ ಪ್ರಸಾರವಾಗಿತ್ತು.

ರಾಮಾಯಣ  1987 ರಿಂದ 88 ರವರೆಗೆ ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ವೀಕ್ಷಿಸಿದ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು 2003ರವರೆಗೆ ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ವೀಕ್ಷಿಸಿದ ಪೌರಾಣಿಕ ಧಾರಾವಾಹಿ ಎಂಬ ದಾಖಲೆಯನ್ನು ಲಿಮ್ಕಾ ಬುಕ್ ನಲ್ಲಿ ರಾಮಾಯಣ ಕಾಯ್ದಿರಿಸಿಕೊಂಡಿತ್ತು.

ಧಾರಾವಾಹಿಗಳಲ್ಲಿ ರಾಮಾಯಣ ವೀಕ್ಷಕರ ಸಂಖ್ಯೆ ಅತೀ ಹೆಚ್ಚು ಎಂದು ಈ ವರದಿ ಮಾಹಿತಿ ನೀಡಿದೆ. ಮೊದಲ ದಿನದ ಮೊದಲ ಸಂಚಿಕೆ 38 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. ರಾತ್ರಿಯ ಮರು ಪ್ರಸಾರದಲ್ಲಿ ಈ ಸಂಖ್ಯೆ 45 ಮಿಲಿಯನ್ ಗೆ ಏರಿಕೆ ಕಂಡಿತ್ತು. ಮರುದಿನ ಬೆಳಗ್ಗಿನ ಪ್ರಸಾರ  40 ದಶಲಕ್ಷ ಮತ್ತು ಸಂಜೆಯ ಶೋ 51 ದಶಲಕ್ಷ ವೀಕ್ಷಕರಿಂದ ವೀಕ್ಷಿಸಲ್ಪಟ್ಟಿದೆ. ಒಟ್ಟಾಗಿ ರಾಮಾಯಣವನ್ನು 91 ಮಿಲಿಯನ್ ಜನರು ವೀಕ್ಷಣೆ ಮಾಡಿರುವುದಾಗಿ ಪ್ರಸಾರ ಭಾರತಿಯ ವರದಿ ತಿಳಿಸಿದೆ…