ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಹಾಗೂ ಸಾರಿಗೆ ಮತ್ತು ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಇದೇ ಜುಲೈ 1 ರಿಂದ 3ರ ವರೆಗೆ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿವರ: ಜುಲೈ 1 ರಂದು ಮಧ್ಯಾಹ್ನ ವಿರೂಪಾಕ್ಷಿಪುರ, ಭೂಹಳ್ಳಿ, ಸಿಂಗರಾಜಿಪುರ, ಬಿ.ವಿ.ಹಳ್ಳಿಯ ವ್ಯಾಪ್ತಿಯ ವಿರೂಪಾಕ್ಷಿಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ.

ಜುಲೈ 2ರಂದು ಬೆಳಿಗ್ಗೆ 10.30ಕ್ಕೆ ಮಳೂರು, ಮಳೂರು ಪಟ್ಟಣ, ಮತ್ತಿಕೆರೆ, ಚಕ್ಕೆರೆ, ಕೂಡ್ಲೂರು, ಮುದಗೆರೆ ವ್ಯಾಪ್ತಿಯ ಮಳೂರಿನಲ್ಲಿ, ಮಧ್ಯಾಹ್ನ 3 ಗಂಟೆಗೆ ಹೊಂಗನೂರು, ತಗಚಗೆರೆ, ವಂದಾರಗುಪ್ಪೆ, ನೀಲಸಂದ್ರ ವ್ಯಾಪ್ತಿಯ ಹೊಂಗನೂರಿನಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಹಾಗೂ ಜುಲೈ 3 ರಂದು ಬೆಳಿಗ್ಗೆ 10.30ಕ್ಕೆ ಚನ್ನಪಟ್ಟಣ ವಾರ್ಡ್ ನಂ. 1 ರಿಂದ 15ರ ವರೆಗೆ ಚನ್ನಪಟ್ಟಣ ಟೌನಿನಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ವಾರ್ಡ್ ನಂ. 16 ರಿಂದ 31ರ ವರೆಗೆ ಚನ್ನಪಟ್ಟಣ ಟೌನಿನಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಮನಗರ ಜಿಲ್ಲೆಗೆ ಸಂಬAಧಿಸಿದAತೆ ಸಾರ್ವಜನಿಕರು, ನಾಗರಿಕರುಗಳು ಎದುರಿಸುತ್ತಿರುವ ಹಲವಾರು ರೀತಿಯ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸಲಾಗುವುದು. ಅದರಂತೆ ರಾಮನಗರ ಜಿಲ್ಲೆಯ ಸಾರ್ವಜನಿಕರು ಖುದ್ದು ಹಾಜರಾಗಿ ಅರ್ಜಿ/ಮನವಿಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version