ನವದೆಹಲಿ: ಶ್ರೀ ರಾಮ್ ಲಲ್ಲಾ ಅವರ ಭವ್ಯ ವಿಗ್ರಹವನ್ನು ಸೋಮವಾರ ವಿಶ್ವದಾದ್ಯಂತದ ಭಕ್ತರಿಗಾಗಿ ಅನಾವರಣಗೊಳಿಸುತ್ತಿದ್ದಂತೆ/ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಒಂದು ಗಂಟೆ ಕಾಲ ನಡೆದ ಭವ್ಯ ‘ಪ್ರಾಣ ಪ್ರತಿಷ್ಠಾ’ ಸಂದರ್ಭದಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಲಾಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ, ಪ್ರಧಾನಿ ಮೋದಿ ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ್ ಲಲ್ಲಾ ವಿಗ್ರಹದ ‘ಆರತಿ’ ಮಾಡಿದರು.

ಈ ನಡುವೆ ವಿವಾದತ್ಮಕ ವರದಿಗಳನ್ನು ಅಂತಾರಾಷ್ಟ್ರೀಯ ‘ಮಾಧ್ಯಮಗಳು ಮಾಡಿದ್ದು, ಈಗ ಭಾರತೀಯರು ಕಿಡಿಕಾರುತ್ತಿದ್ದಾರೆ. ಹಾಗಾದ್ರೇ ಯಾವ ಮಾಧ್ಯಮಗಳು ಏನೇಲ್ಲ ಸುದ್ದಿಗಳನ್ನು ಮಾಡಿದ್ದಾವೆ ಎನ್ನುವುದನ್ನೂ ನೋಡುವುದಾದ್ರೆ ಅದರ ವಿವರ ಈ ಕೆಳಕಂಡತಿದೆ.

CNN: ಸಿಎನ್ಎನ್ ಈ ಕಾರ್ಯಕ್ರಮವನ್ನು ವರದಿ ಮಾಡಿದೆ ರಾಷ್ಟ್ರವ್ಯಾಪಿ ಚುನಾವಣೆಗೆ ಮುನ್ನ ವಿವಾದಾತ್ಮಕ ಹಿಂದೂ ದೇವಾಲಯವನ್ನು ಉದ್ಘಾಟನೆ ಅಂತ ಹೇಳಿದೆ.
BBC  ‘ಅಯೋಧ್ಯೆ ರಾಮ ಮಂದಿರ: ಬಾಬರಿ ಮಸೀದಿ ಧ್ವಂಸಗೊಂಡ ಸ್ಥಳದಲ್ಲಿ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು’ ಎಂಬ ಶೀರ್ಷಿಕೆಯಡಿ ಬಿಬಿಸಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು.

ಪಾಕಿಸ್ತಾನದ ಮಾಧ್ಯಮಗಳು ಈ ಘಟನೆಯನ್ನು ಹೇಗೆ ವರದಿ ಮಾಡಿದವು?
ಡಾನ್ : ‘ಬದಲಾಗುತ್ತಿರುವ ಭಾರತವನ್ನು ಸಂಕೇತಿಸುವ ದೇವಾಲಯವನ್ನು ಮೋದಿ ತೆರೆದಿದ್ದಾರೆ ‘ ಎಂಬ ಶೀರ್ಷಿಕೆ ನೀಡಿದೆ.
ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ : ಎಕ್ಸ್ಪ್ರೆಸ್ ಟ್ರಿಬ್ಯೂನ್ ಆನ್ಲೈನ್ ರಾಯಿಟರ್ಸ್ನ ಪ್ರತಿಯನ್ನು ತೆಗೆದುಕೊಂಡು ವರದಿ ಮಾಡಿದ್ದು , ಅದರಲ್ಲಿ ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನೇತೃತ್ವವನ್ನು ಭಾರತದ ಮೋದಿ ವಹಿಸಿದ್ದಾರೆ ಅಂತ ಹೇಳಿದೆ.

Share.
Exit mobile version