ʼರಾಮಮಂದಿರ ನಿರ್ಮಾಣ ನಮ್ಮ ಪಕ್ಷದ ಅಜೆಂಡಾ ಆಗಿತ್ತು, ಆದ್ರೆ ಕೃಷ್ಣ ಜನ್ಮಭೂಮಿʼ: ಅಮಿತ್‌ ಶಾ..! – Kannada News Now


India

ʼರಾಮಮಂದಿರ ನಿರ್ಮಾಣ ನಮ್ಮ ಪಕ್ಷದ ಅಜೆಂಡಾ ಆಗಿತ್ತು, ಆದ್ರೆ ಕೃಷ್ಣ ಜನ್ಮಭೂಮಿʼ: ಅಮಿತ್‌ ಶಾ..!

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬೆನ್ನೆಲ್ಲೇ ಮಥುರಾ ಕೃಷ್ಣ ಜನ್ಮಭೂಮಿಯ ನಿರ್ಮಾಣದ ಕುರಿತು ಚರ್ಚೆ ಶುರುವಾಗಿದೆ. ಅದ್ರಂತೆ, ದೇವಾಲಯದ ಬಳಿಯಿರುವ ಶಾಹಿ ಈದ್ಗಾ ಮಸೀದಿಯನ್ನ ತೆರವುಗೊಳಿಸಬೇಕು ಎಂದು ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯೂ ಕೂಡ ವಿಚಾರಣೆಗೆ ಸ್ವೀಕೃತವಾಗಿದೆ.

ಈ ಕುರಿತು ಮಾಧ್ಯಮವೊಂದು ಗೃಹ ಸಚಿವ ಅಮಿತ್‌ ಶಾರನ್ನ ಪ್ರಶ್ನಿಸಿದೆ, “ಕೆಲವು ಸಂಘಟನೆಗಳು ಸ್ವಇಚ್ಛೆಯಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ ಹೊರತು ಸರ್ಕಾರದ ಭಾಗವಹಿಸುವಿಕೆ ಇಲ್ಲ. ನಮ್ಮ ಪಕ್ಷವಾಗಲೀ, ಕೇಂದ್ರ ಸರ್ಕಾರವಾಗಿ ಮಥುರಾ ಕೃಷ್ಣಜನ್ಮಭೂಮಿ ವಿಚಾರದಲ್ಲಿ ಭಾಗಿಯಾಗಿಲ್ಲ. ಹಾಗಾಗಿ ಸಲ್ಲಿಕೆಯಾದ ಅರ್ಜಿಯ ಬಗ್ಗೆ ನಾನು ಮಾತನಾಡುವುದು ಸೂಕ್ತ ಎನ್ನಿಸುತ್ತಿಲ್ಲ” ಎಂದಿದ್ದಾರೆ.

ಇನ್ನು ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ನಮ್ಮ ಪಕ್ಷದ ಪ್ರಮುಖ ಆಜೆಂಡವಾಗಿತ್ತು. ಆದ್ರೆ, ಮಥುರಾ ಅರ್ಜಿ ನಾವು ಹಾಕಿದ್ದಲ್ಲ ಎಂದಿದ್ದಾರೆ.

ಅಂದ್ಹಾಗೆ, ಕೃಷ್ಣ ದೇವಾಲಯದ ಒಂದು ಭಾಗವನ್ನು ಒಡೆದು ಈ ಶಾಹಿ ಈದ್ಗಾ ಮಸೀದಿಯನ್ನ 17ನೇ ಶತಮಾನದ ಔರಂಗಜೇಬನ ಆಡಳಿತದಲ್ಲಿ ಕಟ್ಟಲಾಗಿದೆ. ಹಾಗಾಗಿ ದೇಗುಲದ ಪಕ್ಕದಲ್ಲೇ ಇರುವ ಮಸೀದಿಯನ್ನ ತೆರವುಗೊಳಿಸಬೇಕು ಎಂದು ಸೆ.26ರಂದು ಸಂಘಟನೆಗಳು, ಜನರ ಗುಂಪು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ.
error: Content is protected !!