ಕೆಜಿಎಫ್ 2 ಗುಂಗಿನ ನಡುವೆ ಕೆಜಿಎಫ್ 3 ರಂಗು ಶುರುವಾಗಿದೆ. ಸಲಾರ್ ಶೂಟಿಂಗ್ ಕಂಪ್ಲೀಟ್ ಆಗ್ತಿದ್ದಂತೆ ಕೆಜಿಎಫ್ 3 ಸಿನಿಮಾಗೆ ಕಿಕ್ ಸ್ಟಾರ್ಸ್ ಸಿಗಲಿದೆ ಅನ್ನೋ ಗುಸುಗುಸು ಎಲ್ಲೆಡೆ ಹಬ್ಬಿದೆ. ಈ ವಿಚಾರ ಕೇಳಿ ರಾಕಿಭಾಯ್ ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದಾರೆ. ಆದ್ರೆ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಲಾರ್ ಶೂಟಿಂಗ್ ಕಂಪ್ಲೀಟ್ ಆಗ್ತಿದ್ದಂತೆ ಪ್ರಶಾಂತ್ ನೀಲ್ ಜೂನಿಯರ್ ಎನ್ ಟಿಆರ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾರೆ. ಆ ನಂತ್ರ ರಾಮ್ ಚರಣ್ ಜೊತೆ ಕೈ ಜೋಡಿಸುತ್ತಾರೆ ಎನ್ನಲಾಗ್ತಿತ್ತು. ಆದ್ರೆ ಸಲಾರ್ ಬಳಿಕ ನೀಲ್ ಕೆಜಿಎಫ್ 3 ಸಿನಿಮಾ ಮಾಡಲಿದ್ದಾರೆ ಅನ್ನೋ ಟಾಕ್ ಜೋರಾಗಿದೆ. ಇದು ತಾರಕ್-ರಾಮ್ ಫ್ಯಾನ್ಸ್ ಗೆ ನಿರಾಸೆ ಮೂಡಿಸಿದೆ.
ಪ್ರಶಾಂತ್ ನೀಲ್ ಕೆಜಿಎಫ್ 3 ಸಿನಿಮಾದತ್ತ ಚಿತ್ತ ಹರಿಸಿದರೆ ಯಂಗ್ ಟೈಗರ್ ಹಾಗೂ ರಾಮ್ ಚರಣ್ ಜೊತೆ ಯಾವಾಗ ಸಿನಿಮಾ ಮಾಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಓಡಾಡುತ್ತಿದೆ.