ಸುಭಾಷಿತ :

Friday, April 3 , 2020 7:49 AM

`Man v/s Wild’ : ಬಂಡೀಪುರ ಅರಣ್ಯದಲ್ಲಿ ಬೇರ್ ಗ್ರಿಲ್ಸ್ ಜೊತೆ ರಜನಿಕಾಂತ್ ಸಾಕ್ಷ್ಯ ಚಿತ್ರದಲ್ಲಿ ಭಾಗಿ!


Tuesday, January 28th, 2020 1:39 pm

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅವರು ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯ ಚಿತ್ರ ತಯಾರಕ ಬೆಲ್ ಗ್ರಿಲ್ಸ್ ಜೊತೆ ಸಾಕ್ಷ್ಯ ಚಿತ್ರದ ಶೂಟಿಂಗ್ ಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಇಂದು ಆರು ಗಂಟೆಗಳ ಕಾಲ ರಜನಿಕಾಂತ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇರಳದಸುಲ್ತಾನ್ ಬಟ್ಟೆರಿ ಹೆದ್ದಾರಿ, ಮುಲ್ಲೆಹೊಲೆ, ಮದ್ದೂರು ಮತ್ತು ಕಲ್ಕರೆ ಅರಣ್ಯ ಭಾಗದಲ್ಲಿ ಶೂಟಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರವಾಸಿಗರಿಗೆ, ಅರಣ್ಯ ಗಸ್ತು ತಿರುಗುವವರಿಗೆ, ಅಗ್ನಿ ಶಾಮಕ ಸಿಬ್ಬಂದಿ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಅರಣ್ಯ ಇಲಾಖೆಯ ವಿಶೇಷ ಭದ್ರತೆಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions