ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಕಚೇರಿಗೆ ಬಂದ ಜೀವ ಬೆದರಿಕೆ ಇಮೇಲ್‌ಗೆ ಸಂಬಂಧಿಸಿದಂತೆ ರಾಜಸ್ಥಾನದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಬೆದರಿಕೆ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ರಾಜಸ್ಥಾನ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ರಾಜಸ್ಥಾನದ ನಿವಾಸಿಯಾಗಿರುವ ವ್ಯಕ್ತಿಯನ್ನು ಬಾಂದ್ರಾ ಪೊಲೀಸ್ ಠಾಣೆಯ ತಂಡವು ಬಂಧಿಸಿದ್ದು, ಮುಂಬೈಗೆ ಕರೆತರಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೋಧ್‌ಪುರದ ಸಿಯಾಗೋ ಕಿ ಧನಿ ನಿವಾಸಿ ಧಕದ್ ರಾಮ್ ಬಿಷ್ಣೋಯ್ ಎಂಬುವರು ಇಮೇಲ್ ಕಳುಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ‘ರೋಹಿತ್ ಗಾರ್ಗ್’ ಹೆಸರಿನ ಐಡಿಯಿಂದ ಮೇಲ್ ಕಳುಹಿಸಲಾಗಿದೆ. 21 ವರ್ಷದ ರಾಮ್ ನನ್ನು ಬಂಧಿಸಲಾಗಿದ್ದು, ಮುಂಬೈಗೆ ಕರೆತರಲಾಗುವುದು ಎಂದಿದ್ದಾರೆ.
ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ʻಬಿಲ್ಕಿಸ್ ಬಾನೋʼ ಅತ್ಯಾಚಾರಿ, ರಾಜಕಾರಣಿಗಳೊಂದಿಗೆ ಪೋಸ್
SHOCKING NEWS: ʻನರಬಲಿʼ; ಮಾಂತ್ರಿಕನ ಮಾತು ಕೇಳಿ 10 ವರ್ಷದ ಬಾಲಕನನ್ನು ಬಲಿ ಪಡೆದ ಮೂವರು ಅರೆಸ್ಟ್
ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ʻಬಿಲ್ಕಿಸ್ ಬಾನೋʼ ಅತ್ಯಾಚಾರಿ, ರಾಜಕಾರಣಿಗಳೊಂದಿಗೆ ಪೋಸ್
SHOCKING NEWS: ʻನರಬಲಿʼ; ಮಾಂತ್ರಿಕನ ಮಾತು ಕೇಳಿ 10 ವರ್ಷದ ಬಾಲಕನನ್ನು ಬಲಿ ಪಡೆದ ಮೂವರು ಅರೆಸ್ಟ್