ಸೌತ್ ಅಂಗಳದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳದ್ದೇ ಹಂಗಾಮ. ರಾಜಮೌಳಿ ತ್ರಿಬಲ್ ಆರ್ ಸಿನಿಮಾ ಮೂಲಕ ತಾರಕ್ ಹಾಗೂ ರಾಮ್ ಚರಣ್ ಒಂದೇ ಫ್ರೇಮ್ ನಲ್ಲಿ ತಂದು ಸೈ ಎನಿಸಿಕೊಂಡಿದ್ದರು. ಇದೀಗ ವಿಕ್ರಮ್ ಸಿನಿಮಾದಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ನಟಿಸಿದ್ದು, ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈಗ ಹೊಸ ವಿಷ್ಯ ಏನು ಅಂದರೆ ಜೂನಿಯರ್ ಎನ್ ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ 31ನೇ ಸಿನಿಮಾಗೆ ಕಮಲ್ ಹಾಸನ್ ವಿಲನ್ ಎನ್ನುವ ಸುದ್ದಿ ಕೇಳಿ ಬಂದಿತ್ತು. ಈಗ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ಕಮಲ್ ಹಾಸನ್ ನನ್ನು ತಮ್ಮ ಸಿನಿಮಾಗೆ ಕರೆ ತರುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗ್ತಿದೆ.
ಆರ್ ಆರ್ ಆರ್ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮತ್ತೊಂದು ಮೆಗಾ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ನಟಿಸುವುದು ಫೈನಲ್ ಆಗಿದೆ. ಈಗಾಗಲೇ ಕಥೆಯನ್ನು ವಿಜಯೇಂದ್ರ ಪ್ರಸಾದ್ ಮೌಳಿ ತಂದೆ ತಯಾರಿಸಿದ್ದು, ಸದ್ಯದಲ್ಲಿಯೇ ಈ ಚಿತ್ರ ಸೆಟ್ಟೇರಲಿದೆ ಅನ್ನೋ ವದಂತಿ ಹಬ್ಬಿದೆ. ಕಥೆ ತಯಾರಾಗಿರುವುದರಿಂದ ಮೌಳಿ ಪಾತ್ರಗಳ ಆಯ್ಕೆ ಬಗ್ಗೆ ಹೆಚ್ಚು ಗಮನಕೊಡ್ತಿದ್ದಾರಂತೆ.
ಸದ್ಯ ಪಾತ್ರಗಳ ಆಯ್ಕೆಯಲ್ಲಿ ತೊಡಗಿಸಿಕೊಂಡಿರುವ ಜಕ್ಕಣ್ಣ, ಪ್ರಿನ್ಸ್ ಎದುರು ಕಮಲ್ ಹಾಸನ್ ನಿಲ್ಲಿಸುವ ಮೆಗಾ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗ್ತಿದೆ. ಪ್ರಿನ್ಸ್ ಎದುರು ಕಮಲ್ ವಿಲನ್ ಆದ್ರೆ ನಿಜಕ್ಕೂ ಇದೊಂದು ಹೈವೋಲ್ಟೇಜ್ ಸಿನಿಮಾ ಆಗಲಿದೆ ಅಂತಿದ್ದಾರೆ ಸಿನಿಮಾ ಪಂಡಿತರು.