ಬಳ್ಳಾರಿಯಲ್ಲಿ ರೈಲ್ವೆ ಪೊಲೀಸರ ಭರ್ಜರಿ ಬೇಟೆ; ರೈಲಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ಮೌಲ್ಯದ 40 ಕೆಜಿ ಗಾಂಜಾ ವಶ

ಬಳ್ಳಾರಿ: ಜಿಲ್ಲೆಯ ರೈಲ್ವೇ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 40.49 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯ ವಿವರ: ವಾಸ್ಕೋ ಡ ಗಾಮಾ – ಶಾಲಿಮರ್ ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ರೈಲ್ವೇ ಪೊಲೀಸರು ಶ್ವಾನದಳದೊಂದಿಗೆ ರೈಲಿನ ಮೇಲೆ ದಾಳಿ ನಡೆಸಿದರು. ಸೀಟಿನ ಕೆಳಗೆ ಬಚ್ಚಿಟ್ಟಿದ್ದ ಮಾದಕ ದ್ರವ್ಯ: ರೈಲಿನ ಜನರಲ್ ಬೋಗಿಯಲ್ಲಿ ತಪಾಸಣೆ ನಡೆಸಿದಾಗ, ಸೀಟಿನ ಕೆಳಭಾಗದಲ್ಲಿ … Continue reading ಬಳ್ಳಾರಿಯಲ್ಲಿ ರೈಲ್ವೆ ಪೊಲೀಸರ ಭರ್ಜರಿ ಬೇಟೆ; ರೈಲಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ಮೌಲ್ಯದ 40 ಕೆಜಿ ಗಾಂಜಾ ವಶ