ನವದೆಹಲಿ : ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ್ರೆ ನಾವು ಸೂಪರ್ ಪವರ್ ಆಯೋಗವನ್ನ ರಚಿಸುತ್ತೇವೆ ಮತ್ತು ರಾಮ ಮಂದಿರ ತೀರ್ಪನ್ನ ರದ್ದುಗೊಳಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಮ್ಮೆ ಹೇಳಿದ್ದರು ಎಂದು ಮಾಜಿ ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಸೋಮವಾರ ಹೇಳಿದ್ದಾರೆ. ಅಶಿಸ್ತಿನ ಆರೋಪದ ಮೇಲೆ ಕೃಷ್ಣಂ ಅವರನ್ನ 2024ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಕೃಷ್ಣಂ, “ನಾನು ಕಾಂಗ್ರೆಸ್ನಲ್ಲಿ 32 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದೇನೆ ಮತ್ತು ರಾಮ ಮಂದಿರ ನಿರ್ಧಾರ ಬಂದಾಗ, ರಾಹುಲ್ ಗಾಂಧಿ ತಮ್ಮ ಆಪ್ತರೊಂದಿಗಿನ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ, ಅವರು ಸೂಪರ್ ಪವರ್ ಆಯೋಗವನ್ನ ರಚಿಸುತ್ತಾರೆ ಮತ್ತು ರಾಮ ಮಂದಿರ ನಿರ್ಧಾರವನ್ನ ರದ್ದುಗೊಳಿಸುತ್ತಾರೆ ಎಂದು ಹೇಳಿದರು” ಎಂದು ಹೇಳಿದರು.

ರಾಜೀವ್ ಗಾಂಧಿ ಅವರು ಶಾ ಬಾನು ನಿರ್ಧಾರವನ್ನ ರದ್ದುಗೊಳಿಸಿದಂತೆಯೇ ರಾಮ ಮಂದಿರ ನಿರ್ಧಾರವನ್ನ ರದ್ದುಗೊಳಿಸುವುದಾಗಿ ರಾಹುಲ್ ಗಾಂಧಿ ಕೂಡ ಹೇಳಿದ್ದರು ಎಂದು ಕೃಷ್ಣಂ ಹೇಳಿದ್ದಾರೆ.

 

 

 

ಅಶ್ಲೀಲ ವಿಡಿಯೋ ಕೇಸ್ : ಪ್ರಕರಣದಲ್ಲಿ ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸುವಂತಿಲ್ಲ : ಕೋರ್ಟ್ ತಡೆಯಾಜ್ಞೆ

ಅಪಹರಣ ಕೇಸ್: ನಾಳೆಗೆ HD ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Teacher Jobs: ‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳೇ ಗಮನಿಸಿ: ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Share.
Exit mobile version