ಕೇಂದ್ರ ಸರ್ಕಾರ ಕೃಷಿ ಕಾನೂನಿನ ಮೂಲಕ ರೈತರ ರಕ್ತ ಹೀರಲು ಹೊರಟಿದೆ : ರಾಹುಲ್ ಗಾಂಧಿ ವಾಗ್ಧಾಳಿ – Kannada News Now


India

ಕೇಂದ್ರ ಸರ್ಕಾರ ಕೃಷಿ ಕಾನೂನಿನ ಮೂಲಕ ರೈತರ ರಕ್ತ ಹೀರಲು ಹೊರಟಿದೆ : ರಾಹುಲ್ ಗಾಂಧಿ ವಾಗ್ಧಾಳಿ

ಡಿಜಿಟಲ್ ಡೆಸ್ಕ್ : ಕೇಂದ್ರ ಸರ್ಕಾರ ದೇಶದ ಬುನಾದಿಯನ್ನೇ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ, . ಕೇಂದ್ರ ಸರಕಾರವು ಕೃಷಿ ಕಾನೂನಿನ ಮೂಲಕ ರೈತರ ರಕ್ತ ಹೀರಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಸ್ಮಾರ್ಟ್ ಹಳ್ಳಿ ಅಭಿಯಾನ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿದ ಅವರು, ಕೇಂದ್ರ ಸರಕಾರವು ನೂತನವಾಗಿ ಜಾರಿ ತಂದಿರುವ ಕೃಷಿ ಮಸೂದೆಯ ವಿರುದ್ಧ ವಾಗ್ಧಾಳಿ ನಡೆಸಿದರು.

. ಕೇಂದ್ರ ಸರಕಾರವು ಕೃಷಿ ಕಾನೂನಿನ ಮೂಲಕ ರೈತರ ರಕ್ತ ಹೀರಲು ಹೊರಟಿದೆ. ದೇಶದ ರೈತರನ್ನು ದುರ್ಬಲಗೊಳಿಸುವ ಮೂಲಕ ದೇಶವನ್ನೇ ದುರ್ಬಲಗೊಳಿಸಲು ಹೊರಟಿದೆ ಎಂದರು.

‘ಈ ಕಾನೂನಿನ ಕುರಿತು ಚರ್ಚಿಸಲು ಪಂಜಾಬ್‌ ಸರ್ಕಾರ ಅ.19ರಂದು ವಿಶೇಷ ಅಧಿವೇಶನ ಕರೆದಿದ್ದು, ಇದು ಸ್ವಾಗತಾರ್ಹ ನಡೆ. ಶಾಸಕರೇ ಈ ಕಾನೂನಿನ ಬಗ್ಗೆ ನಿರ್ಧರಿಸಲಿದ್ದಾರೆ. ಆದರೆ, ಕೇಂದ್ರ ಸರಕಾರವು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಇದರ ಕುರಿತು ಚರ್ಚಿಸಲು ಏಕೆ ಅವಕಾಶ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಜನರ ಕಷ್ಟಕ್ಕೆ ಸ್ಪಂದಿಸಲಾಗದಷ್ಟು ವಯಸ್ಸಾಗಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲೇ ಆರಾಮವಾಗಿ – ಸಿಎಂ ವಿರುದ್ಧ ಮಾಜಿ ಸಿಎಂ ಗುಡುಗು
error: Content is protected !!