ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ. ಭಾನುವಾರ ಭಾರಿ ಮಳೆ ಸುರಿಯುತ್ತಿರುವ ನಡುವೆಯೇ ರಾಹುಲ್‌ ಗಾಂಧಿ ಭಾಷಣ ಮಾಡಿದ್ದರು. ಮಳೆಯನ್ನೂ ಲೆಕ್ಕಿಸದೆ ರಾಹುಲ್ ಗಾಂಧಿ ಭಾಷಣ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

BIGG NEWS: ಪೊಲೀಸ್ ಸಹಾಯವಾಣಿ ʼ112ʼ ಆರಂಭ: ಕರೆ ಬಂದ 15 ನಿಮಿಷದಲ್ಲಿ ಸ್ಥಳಕ್ಕೆ ಸಿಬ್ಬಂದಿ ಭೇಟಿ; ಪ್ರತಾಪ್ ರೆಡ್ಡಿ

ಈ ಫೋಟೋವನ್ನು ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಕೂಡ ಶೇರ್ ಮಾಡಿಕೊಂಡು ಕ್ಯಾಪ್ಷನ್ ಕೊಟ್ಟಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ, ಆ ಜಡಿ ಮಳೆಯಲ್ಲಿಯೂ ಭಾಷಣ ಕೇಳಲು ಸಾಕಷ್ಟು ಮಂದಿ ನೆರೆದಿರುವುದೇ ವಿಶೇಷ. ಜನ ನೆರೆದಿರುವುದೇ ಎಲ್ಲವನ್ನೂ ನಿಮಗೆ ತಿಳಿಸುತ್ತದೆ. ಅಂದರೆ ರಾಹುಲ್ ಗಾಂಧಿ ಭಾಷಣ ಕೇಳಲು ಜನ ಕಿಕ್ಕಿರಿದು ನಿಂತಿರುವುದು ಗಮನಸೆಳೆದಿದೆ ಎಂದು ಹೇಳುವ ಮೂಲಕ ರಮ್ಯಾ ಅವರು ಕೈ ನಾಯಕನನ್ನು ಹೊಗಳಿದ್ದಾರೆ.

Share.
Exit mobile version