ದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಅವರಿಗೆ ವ್ಯವಸ್ಥಿತ ಗಂಭೀರತೆ ಇಲ್ಲ, ಜವಾಬ್ದಾರಿ ಇಲ್ಲದೆ ಅಧಿಕಾರ ಹೊಂದಲು ಬಯಸುತ್ತಾರೆ ಮತ್ತು ಅವರು ರಾಜಕೀಯಕ್ಕೆ ಯೋಗ್ಯರಲ್ಲ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ(Himanta Biswa Sarma) ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ʻರಾಹುಲ್ ಗಾಂಧಿ ಅವರು ರಾಜಕೀಯಕ್ಕೆ ಸೂಕ್ತವಲ್ಲ. ಅವರು ಊಳಿಗಮಾನ್ಯ ದೊರೆಯಂತೆ ನಡೆದುಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಯಾತ್ರೆಯಲ್ಲಿದ್ದರೂ ದೇಶಕ್ಕಾಗಿ ಅವರ ದೃಷ್ಟಿಕೋನವನ್ನು ತಿಳಿಸುವಲ್ಲಿ ವಿಫಲರಾಗಿದ್ದಾರೆ. ರಾಹುಲ್ ಗಾಂಧಿ ಕೆಲವೊಮ್ಮೆ ಮೀಟಿಂಗ್‌ನ ನಡುವೆ ಬಿಟ್ಟು ಜಾಗಿಂಗ್‌ನಂತಹ ತಮ್ಮ ವ್ಯಾಯಾಮಕ್ಕೆ ಹೋಗಬಹುದು ಅಥವಾ ಇದ್ದಕ್ಕಿದ್ದಂತೆ ಮುಂದಿನ ಕೋಣೆಗೆ ಹೋಗಿ ಅರ್ಧ ಗಂಟೆಯ ನಂತರ ಬರಬಹುದು. ಅವರಿಗೆ ವ್ಯವಸ್ಥಿತ ಗಂಭೀರತೆ ಇಲ್ಲʼ ಎಂದು ಆರೋಪಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಮತ್ತು ಅಮೇಥಿಯಿಂದ ಸೋತಿದ್ದಕ್ಕಾಗಿ ನೈತಿಕ ಹೊಣೆಗಾರಿಕೆಯನ್ನು ಹೊತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ, ಪಕ್ಷದ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಶರ್ಮಾ ಹೇಳಿದರು.

ಎರಡು ದಶಕಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದ ಶರ್ಮಾ ಅವರು 2015ರಲ್ಲಿ ಬಿಜೆಪಿ ಸೇರಿದ್ದರು.

BIGG NEWS : ರಾಜ್ಯದ ಹಲವು ಜಿಲ್ಲೆಗಳಲ್ಲಿಇಂದು ಮತ್ತೆ ನಾಳೆ ಗುಡುಗು ಸಹಿತ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ |karnataka Weather Report

BIGG NEWS : ಇಂದಿನಿಂದ 21 ದಿನ ಕರ್ನಾಟಕದಲ್ಲಿ ‘ರಾಹುಲ್ ಗಾಂಧಿ ಐಕ್ಯತಾ ಯಾತ್ರೆ’ |Bharath Jodo Yathra

BIGG NEWS : ಪೋಕ್ಸೋ ಕೇಸ್ ; ‘ಮುರುಘಾ ಶ್ರೀ’ಗಳಿಗೆ ಬಿಗ್ ಶಾಕ್: ‘ಹೊಸ ಪೀಠಾಧ್ಯಕ್ಷ’ರ ಆಯ್ಕೆಗೆ ಸಭೆಯಲ್ಲಿ ನಿರ್ಧಾರ | Murugha Sri

Share.
Exit mobile version