ಪಿಎಂ ಕೇರ್ಸ್ ಮೂಲಕ ಆಪತ್ಕಾಲದಲ್ಲಿನ ಲಾಭ ಮಾಡಿಕೊಂಡ ಕೇಂದ್ರ ಸರ್ಕಾರ : ಕಿಡಿ ಕಾರಿದ ರಾಹುಲ್ ಗಾಂಧಿ – Kannada News Now


India

ಪಿಎಂ ಕೇರ್ಸ್ ಮೂಲಕ ಆಪತ್ಕಾಲದಲ್ಲಿನ ಲಾಭ ಮಾಡಿಕೊಂಡ ಕೇಂದ್ರ ಸರ್ಕಾರ : ಕಿಡಿ ಕಾರಿದ ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ಕೊರೊನಾ ಸಂದರ್ಭದಲ್ಲಿ ನೀಡಿದ ಭರವಸೆಗಳು ಕೇವಲ ಗಾಳಿ ಗೋಪುರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

21 ದಿನಗಳಲ್ಲಿ ಕೊರೊನಾ ನಿರ್ಮೂಲನೆ, ಜನರ ರಕ್ಷಣೆಗಾಗಿ ಆರೋಗ್ಯ ಸೇತು ಆ್ಯಪ್​ ಹಾಗೂ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್​, ಆತ್ಮನಿರ್ಭರವಾಗಿರಿ ಹೀಗೆ ಹೇಳುತ್ತಾ ಸುಳ್ಳುಗಳ ಗೋಪುರವನ್ನೆ ನಿರ್ಮಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿ ಸರ್ಕಾರ ಪಿಎಂ ಕೇರ್ಸ್​ಅನ್ನು ಸ್ಥಾಪಿಸುವ ಮೂಲಕ ”ವಿಪತ್ತಿನಲ್ಲಿ ಅವಕಾಶ” ಕಂಡುಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.

ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಪ್ರಧಾನಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (PM CARES) ನಿಧಿಯನ್ನು ಮಾರ್ಚ್ 2020 ರಲ್ಲಿ ರಚಿಸಲಾಯಿತು.