ಸುಭಾಷಿತ :

Wednesday, January 22 , 2020 12:11 PM

ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ : ಎರಡನೇ ಸುತ್ತು ಪ್ರವೇಶಿಸಿದ ಸಿಂಧೂ, ಪ್ರಣಯ್


Thursday, November 14th, 2019 10:14 am

ಹಾಂಕಾಂಗ್‌: ಭಾರತದ ಹೆಮ್ಮೆಯ ಆಟಗಾರರಾದ ಪಿ.ವಿ ಸಿಂಧೂ ಮತ್ತು ಎಚ್‌.ಎಸ್‌ ಪ್ರಣಯ್‌ ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅನುಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ.

ಆದರೆ, ಸೈನಾ ನೆಹ್ವಾಲ್‌, ಸಮೀರ್‌ ವರ್ಮ ಮತ್ತು ಸಾಯಿ ಪ್ರಣೀತ್‌ ಮೊದಲ ಸುತ್ತಿನಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಹಾಂಕಾಂಗ್‌ ಕೊಲಿಸಿಯಮ್‌ನಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 6ನೇ ಶ್ರೇಯಾಂಕಿತೆ ಸಿಂಧೂ 21-15, 21-16 ಗೇಮ್‌ಗಳಿಂದ ದ.ಕೊರಿಯಾದ ಕಿಂಗಾ ವನ್‌ ವಿರುದ್ಧ ಗೆದ್ದರೆ, ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಎಚ್‌.ಎಸ್‌ ಪ್ರಣಯ್‌ 21-17, 21-17ರಿಂದ ಇಂಡೊನೇಷ್ಯಾದ ಜೊನಾತನ್‌ ಕ್ರಿಸ್ಟೀ ಅವರನ್ನು ಮಣಿಸಿ 2ನೇ ಸುತ್ತು ಪ್ರವೇಶಿಸಿದರು.

ಆದರೆ ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್‌ ಚೀನಾದ ಕಾಯ್‌ ಯಾನ್‌ ಯಾನ್‌ ವಿರುದ್ಧದ 13-21, 20-22 ಗೇಮ್‌ಗಳಿಂದ ಸೋತರು. ಇನ್ನು ಸಮೀರ್‌ ವರ್ಮ ಚೈನೀಸ್‌ ತೈಪೆಯ ವಾಂಗ್‌ ಝೂ ವೀ ಎದುರು 11-21, 21-13, 8-21 ಗೇಮ್‌ಗಳಿಂದ ಸೋತರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions