ದಕ್ಷಿಣ ಕನ್ನಡ : ಮಂಗಳೂರಿನ ಜೋಕಟ್ಟೆ ಮತ್ತು ಪಡೀಲ್ ನಿಲ್ದಾಣಗಳ ನಡುವಿನ ಹಳೆಯ ಸುರಂಗದ ಸಂಪೂರ್ಣ ಟ್ರ್ಯಾಕ್ ನವೀಕರಣ ಕಾರ್ಯಗಳಿಗಾಗಿ ಲೈನ್ ಬ್ಲಾಕ್/ಪವರ್ ಬ್ಲಾಕ್‌ನಿಂದ ಕೆಲವು ರೈಲುಗಳನ್ನು ರದ್ದುಗೊಳಿಸಿದ್ದಾರೆ.
ಕೆಲವು ರೈಲುಗಳನ್ನು ಭಾಗಶಃ ರದ್ದು ಹಾಗೂ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಕಾಮಗಾರಿ ಹಿನ್ನೆಲೆ ಫೆ.5ರಿಂದ ರೈಲು ಸಂಚಾರದಲ್ಲಿ ವ್ಯತ್ಯಾಸವಾಗಲಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದರು.
ಫೆ.7 ಮತ್ತು 8ರಂದು, ರೈಲು ಸಂಖ್ಯೆ 06485/06484 ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ಮತ್ತು ರೈಲು ಸಂಖ್ಯೆ 06489/06488 ಮಂಗಳೂರು ಸೆಂಟ್ರಲ್ -ಸುಬ್ರಹ್ಮಣ್ಯ ರಸ್ತೆ- ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ರದ್ದಾಗಲಿದೆ.