BREAKING: ಶಾಲೆಯಲ್ಲಿ ಪ್ರಾರ್ಥನೆ ವೇಳೆ ನೂಕಾಟ ತಳ್ಳಾಟ: 4ನೇ ತರಗತಿ ಬಾಲಕಿ ಕಾಲು ಮುರಿತ

ರಾಯಚೂರು: ಜಿಲ್ಲೆಯಲ್ಲಿ ಶಾಲೆಯೊಂದರಲ್ಲಿ ಪ್ರಾರ್ಥನೆ ಮಾಡುತ್ತಿದ್ದಂತ ಸಂದರ್ಭದಲ್ಲಿ ತಳ್ಳಾಟ, ನೂಕಾಟ ಉಂಟಾಗಿದೆ. ಇದರಿಂದಾಗಿ 4ನೇ ತರಗತಿ ಬಾಲಕಿ ಕಾಲು ಮುರಿದಿರುವುದಾಗಿ ತಿಳಿದು ಬಂದಿದೆ. ರಾಯಚೂರಿನ ಮರ್ಚೆಡ್ ಶಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಾರ್ಥನೆ ವೇಳೆಯಲ್ಲಿ ತಳ್ಳಾಟ, ನೂಕಾಟ ಉಂಟಾದಾಗ 4ನೇ ತರಗತಿಯ ಸೋನಿ ಎನ್ನುವಂತ ಬಾಲಕಿಯ ಕಾಲು ಮುರಿದಿರುವುದಾಗಿ ಹೇಳಲಾಗುತ್ತಿದೆ. ಶಿಕ್ಷಕರು ಗೈರು ಹಿನ್ನಲೆಯಲ್ಲಿ ಮಕ್ಕಳಿಂದಲೇ ಪ್ರಾರ್ಥನೆ ನಡೆಸಲಾಗುತ್ತಿತ್ತು. ಈ ವೇಳೆಯಲ್ಲಿ ನೂಕಾಟ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ‘ರಾಜ್ಯದ ಸರ್ಕಾರಿ ನೌಕರ’ರಿಗೆ ‘ಆರೋಗ್ಯ ಸಂಜೀವಿನಿ … Continue reading BREAKING: ಶಾಲೆಯಲ್ಲಿ ಪ್ರಾರ್ಥನೆ ವೇಳೆ ನೂಕಾಟ ತಳ್ಳಾಟ: 4ನೇ ತರಗತಿ ಬಾಲಕಿ ಕಾಲು ಮುರಿತ