ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಪಾಕಿಸ್ತಾನದಲ್ಲಿ ‘ಗನ್’ ತರಿಸಿಕೊಳ್ಳುವುದು ‘ಪಿಜ್ಜಾ’ ಆರ್ಡರ್ ಮಾಡಿದಷ್ಟೇ ಸುಲಭ ಎಂಬ ಆಘಾತಕಾರಿ ಮಾಹಿಯೊಂದು ಹೊರಬಿದ್ದಿದೆ.
ಖಾಸಗಿ ಸುದ್ದಿಯೊಂದು ಶಾಕಿಂಗ್ ಮಾಹಿತಿ ರಿವೀಲ್ ಮಾಡಿದೆ .ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಜನರು ಸೋಶಿಯಲ್ ಮೀಡಿಯಾಗಳ ಮೂಲಕ ತಮಗಿಷ್ಟವಾದ ಗನ್ ಗಳನ್ನು ಆಯ್ಕೆ ಮಾಡಿ ನಂತರ ವಿತರಕರಿಗೆ ಕರೆ ಮಾಡಿ ಬೆಲೆಯ ಬಗ್ಗೆ ಚರ್ಚೆ ಮಾಡುತ್ತಾರೆ.ಬಳಿಕ ಮುಂಗಡ ಹಣ ಪಾವತಿಸಿದರೆ ಸಾಕಂತೆ ಮನೆಗೆ ಗನ್ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆಯಂತೆ.
ಪಾಕಿಸ್ತಾನದಲ್ಲಿ ‘ಗನ್’ ತರಿಸಿಕೊಳ್ಳುವುದು ‘ಪಿಜ್ಜಾ’ ಆರ್ಡರ್ ಮಾಡಿದಷ್ಟೇ ಸುಲಭವಂತೆ..
ಗನ್ ತರಿಸಿಕೊಂಡ ಪಾಕ್ ವ್ಯಕ್ತಿಯೊಬ್ಬ ಸುದ್ದಿವಾಹಿನಿಯೊಂದಕ್ಕೆ ಇಂತಯ ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. 38,000 ಸಾವಿರ ಬೆಲೆಯ ಗನ್ ಪಡೆಯಲು ಈತ 10,000 ರೂ ಅಡ್ವಾನ್ ಮಾಡಿದ್ದನಂತೆ. ಗನ್ ಕೈಗೆ ಸಿಕ್ಕ ಬಳಿಕ ಉಳಿದ ಹಣ ಪಾವತಿ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಗನ್ ಪಡೆಯಲು ಈತ ಯಾವುದೇ ಲೈಸೆನ್ಸ್ ಪಡೆದಿರಲ್ಲವಂತೆ, ಮೊಬೈಲ್ ಫೋನ್ ನಲ್ಲಿ ಸುಲಭವಾಗಿ ಆರ್ಡರ್ ಮಾಡಿ ಗನ್ ಪಡೆದಿದ್ದನಂತೆ. ಕರಾಚಿಯಲ್ಲಿ ಬಹಳ ಸುಲಭವಾಗಿ ಗನ್ ಖರೀದಿಸುವ ಜಾಲಗಳಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ‘ಗನ್’ ತರಿಸಿಕೊಳ್ಳುವುದು ‘ಪಿಜ್ಜಾ’ ಆರ್ಡರ್ ಮಾಡಿದಷ್ಟೇ ಸುಲಭವಂತೆ.
ಸಾಂದರ್ಭಿಕ ಚಿತ್ರ