ಕೆಎನ್ಎನ್ ಡಿಜಿಟಲ್ ಡೆಸ್ಕ್  : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಉತ್ತರಪ್ರದೇಶವನ್ನು ಪ್ರವೇಶಿಸಿದ್ದು, ಕೆಲವೇ ದಿನಗಳಲ್ಲಿ ಪಂಜಾಬಿನಲ್ಲಿ ನಡೆಯಲಿದೆ. ಇದೇ ಬೆನ್ನಲ್ಲೆ ಪಂಜಾಬಿನಲ್ಲಿ ಯಾತ್ರೆ ನಡೆದಂತೆ ಖಲಿಸ್ತಾನ್ ಪರ ಗುಂಪು ಎಚ್ಚರಿಕೆ ನೀಡಿದೆ.

ಪಂಜಾಬಿನ ಶ್ರೀ ಮುಕ್ತಸರ ಸಾಹಿಬ್‌ನಲ್ಲಿರುವ ಎಸ್‌ಎಸ್‌ಪಿ (SSP office) ಕಚೇರಿಯ ಗೋಡೆಗಳ ಮೇಲೆ ಖಾಲಿಸ್ತಾನ್ ಪರವಾಗಿ ಘೋಷಣೆಗಳನ್ನು ಬರೆಯಲಾಗಿದೆ. ಅಮೇರಿಕಾ ಮೂಲದ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ಈ ಕೃತ್ಯದ ಹೊಣೆ ಹೊತ್ತುಕೊಂಡು ವಿಡಿಯೋವನ್ನು ಬಿಡುಗಡೆ ಮಾಡಿದೆ.

ಖಲಿಸ್ತಾನಿ ಗುಂಪು ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ದು, ಪಂಜಾಬಿನಲ್ಲಿ ಬೀದಿಗಳಲ್ಲಿ ನಡೆಯಲು ಸವಾಲು ಹಾಕಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜನವರಿ 11 ರಂದು ಪಂಜಾಬ್ ಪ್ರವೇಶಿಸಲಿದೆ.

1984ರಲ್ಲಿ ಇಂದಿರಾಗಾಂಧಿ, 1991ರಲ್ಲಿ ರಾಜೀವ್‌ ಗಾಂಧಿಯನ್ನು ಹೇಗೆ ಹತ್ಯೆಗೈದಿದ್ದರೋ, ಅದೇ ರೀತಿಯಲ್ಲಿ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯನ್ನು ನಿಲ್ಲಿಸಲಾಗುವುದು ಎಂದು ಗುಂಪು ಬೆದರಿಕೆ ಹಾಕಿದೆ.

ಶ್ರೀ ಮುಕ್ತಸರ ಸಾಹಿಬ್‌ನಲ್ಲಿ ಇಂತಹ ಘಟನೆ ವರದಿಯಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಸರ್ಕಾರಿ ಕಾಲೇಜಿನ ಗೋಡೆಗಳ ಮೇಲೆ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿತ್ತು.

ಭಾರತ್ ಜೋಡೊ ಯಾತ್ರೆಯು ಒಂಬತ್ತು ದಿನಗಳ ಚಳಿಗಾಲದ ವಿರಾಮದ ನಂತರ ರಾಷ್ಟ್ರ ರಾಜಧಾನಿಯಿಂದ ತನ್ನ ಎರಡನೇ ಹಂತದ ಪ್ರಯಾಣವನ್ನು ಇಂದು ಪುನಾರಂಭಿಸಿದ್ದು,ಮಧ್ಯಾಹ್ನ ಹೊರವರ್ತುಲ ರಸ್ತೆಯ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ.

ಯಾತ್ರೆ ಎರಡು ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ನಡೆಯಲಿದ್ದು, ಗುರುವಾರ ಸಂಜೆ ವೇಳೆಗೆ ಹರಿಯಾಣದ ಪಾಣಿಪತ್‌ಗೆ ಪ್ರವೇಶಿಸಲಿದೆ.

ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆ 100 ದಿನ ಪೂರೈಸಿದ್ದು, ಇಲ್ಲಿಯವರೆಗೆ 3 ಸಾವಿರ ಕಿ.ಮೀ. ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣದ ಭಾಗಗಳಲ್ಲಿ ನಡೆದಿದೆ.

BIGG NEWS : ಗೋಧಿ & ಅಕ್ಕಿ ರಫ್ತು ಹೆಚ್ಚಳ ; ರೈತರಿಗೆ ಲಾಭ, ಸಾಮಾನ್ಯರಿಗೆ ಬೆಲೆ ಏರಿಕೆ ಸಂಕಷ್ಟ

JOB ALERT : ಉದ್ಯೋಗಾಂಕ್ಷಿಗಳಿಗೆ ಬಂಪರ್ ಸುದ್ದಿ : ಬೆಂಗಳೂರಿನಲ್ಲಿ ಕೆಲಸ, ತಿಂಗಳಿಗೆ 60,000 ಸಂಬಳ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಗಮನಿಸಿ : ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಜ.31 ರವರೆಗೆ ಅವಕಾಶ |Scholarship

Share.
Exit mobile version