ಬೆಂಗಳೂರು : ರಾಜ್ಯದಲ್ಲಿ ಮಳೆಗಾಲ ಶುರುವಾಗಿದ್ದು, ಸಾರ್ವಜನಿಕರು ವಿದ್ಯುತ್‌ ಅವಘಡಗಳ ಕುರಿತು ಅರಿತುಕೊಳ್ಳಬೇಕು. ವಿದ್ಯುತ್‌ ಸುರಕ್ಷತೆ ಕುರಿತಂತೆ ಮೆಸ್ಕಾಂ ಸಾರ್ವಜನಿಕರಿಗೆ ಮಹತ್ವದ ಮಾಹಿತಿ ನೀಡಿದ್ದು, ಇವುಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ.

ವಿದ್ಯುತ್ ಸುರಕ್ಷತೆಗೆ ಈ ಅಂಶಗಳನ್ನು ಗಮನಿಸಿ

ವಿದ್ಯುತ್ ಮಾರ್ಗದ ಕೆಳಗೆ ಅಥವಾ ಪಕ್ಕದಲ್ಲಿರುವ ಕೊಳವೆ ಬಾವಿ ದುರಸ್ತಿ ಕೆಲಸವನ್ನು ಮಾಡುವ ಮುನ್ನ ಮೆಸ್ಕಾಂ ಕಚೇರಿಗೆ ತಿಳಿಸಿ.

ಕಟ್ಟಡ ಕಾಮಗಾರಿಯ ವೇಳೆಯಲ್ಲಿ ಕಬ್ಬಿಣದ ಸರಳುಗಳನ್ನು ಸಾಗಿಸುವಾಗ ವಿದ್ಯುತ್ ಲೈನ್‌ಗೆ ತಾಗದಂತೆ ಎಚ್ಚರವಹಿಸಿ.

ತುಂಡಾದ ಅಥವಾ ಇನ್ಸುಲೇಷನ್ ಇಲ್ಲದ ವಿದ್ಯುತ್ ತಂತಿಗಳನ್ನು ಮುಟ್ಟಬೇಡಿ. ಸ್ವಿಚ್ ಬೋರ್ಡ್‌ಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಿ.

ವಿದ್ಯುತ್ ತಂತಿಗಳ ಸನಿಹದಲ್ಲಿ ಬಟ್ಟೆಗಳನ್ನು ಒಣಗಲು ಹಾಕಬೇಡಿ.

ಟ್ರಾನ್ಸ್‌ಫಾರ್ಮ‌್ರಗಳ ಸುತ್ತಲಿನ ತಂತಿ ಬೇಲಿ ಮಟ್ಟದಿರಿ.

ನೀರು ಕಾಯಿಸಲು ತೆರೆದ ಕಾಯ್ಸ್ಗಳನ್ನು ಬಳಸಬೇಡಿ.

ವಿದ್ಯುತ್ ಕಂಬಗಳಿಗೆ ಚಾನುವಾರುಗಳನ್ನು ಕಟ್ಟದಿರಿ.

ಐಎಸ್‌ ಐ ಗುರುತನ್ನು ಹೊಂದಿರುವ ವಿದ್ಯುತ್ ಉಪಕರಣಗಳನ್ನು ಬಳಸಿ.

ಒದ್ದೆ ಕೈಗಳಿಂದ ಸ್ವಿಚ್ ಗಳನ್ನು ಮುಟ್ಟಬೇಡಿ. ಒಂದೇ ಸರ್ಕ್ಯೂಟ್‌ ಗೆ ಹಲವಾರು ಉಪಕರಣಗಳನ್ನು ಜೋಡಿಸಬೇಡಿ.

ಇಲೆಕ್ಟಿಕಲ್ ಉಪಕರಣಗಳ/ಸಾಕೆಟ್ ಗಳ ಹತ್ತಿರ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ಸಾಮಾಗ್ರಿಗಳನ್ನು ಇಡಬೇಡಿ.

ವಿದ್ಯುತ್ ಮಾರ್ಗಗಳಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಬೇಡಿ.

ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಪ್ರಚಾರ ಫಲಕಗಳನ್ನು ಕಟ್ಟಬೇಡಿ.

ಸರ್ಕಾರದ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಮೂಲಕವೇ ವೈಯರಿಂಗ್ ಕೆಲಸಗಳನ್ನು ಮಾಡಿಸಿ.

ತೋಟಗಳಲ್ಲಿ ಅಲ್ಯುಮಿನಿಯಂ ಏಣಿಗಳನ್ನು ಹಾಗೂ ಕೋಲುಗಳನ್ನು ಬಳಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಿ.

ವಿದ್ಯುತ್ ಲೈನ್‌ಗಳ ಮೇಲೆ ಮರದ ಕೊಂಬೆಗಳು ಬಿದ್ದಲ್ಲಿ ತೆಗೆಯಲು ಪ್ರಯತ್ನಿಸಬೇಡಿ. ಕೂಡಲೇ ಸ್ಥಳೀಯ ಮೆಸ್ಕಾಂ ಕಚೇರಿಗೆ ಅಥವಾ ಮೆಸ್ಕಾಂ ಲೈನ್ ಮ್ಯಾನ್ ರವರಿಗೆ ತಿಳಿಸಿ.

ವಿದ್ಯುತ್ ಲೈನ್‌ನ ಕೆಳಗಡೆ ಗಿಡಗಳನ್ನು ನೆಡಬೇಡಿ.

ಕಟ್ಟಡ ನಿರ್ಮಾಣ ಮಾಡುವ ನಿಯಮಗಳ ಪ್ರಕಾರ ವಿದ್ಯುತ್ ಮಾರ್ಗ ಹಾಗೂ ಕಟ್ಟಡದ ನಡುವೆ ಅಂತರವನ್ನು ಕಾಯ್ದುಕೊಳ್ಳಿ,

ಕಟ್ಟಡ ಕಾರ್ಮಿಕರು ವಿದ್ಯುತ್ ಉಪಕರಣಗಳನ್ನು ಉಪಯೋಗಿಸುವಾಗ ಜಾಗೃತೆಯಿಂದ ಕಾರ್ಯನಿರ್ವಹಿಸಿ.

ವಿದ್ಯುತ್ ಲೈನ್‌ ಗಳ ಕೆಳಗೆ ಸರಕು ಸಾಗಾಣಿಕೆ ಸಮಯದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. * ವಿದ್ಯುತ್ ಕಂಬಗಳನ್ನು ಹತ್ತಬೇಡಿ – ಸ್ವತಃ ದುರಸ್ತಿ ಕಾರ್ಯ ಮಾಡುವುದು ಆಪಾಯಕಾರಿ.

ವಿದ್ಯುತ್ ಸುರಕ್ಷತಾ ಕ್ರಮಗಳಿಗಾಗಿ ಸಮೀಪದ ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಿ ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಉಚಿತ ದೂರವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಿ

Share.
Exit mobile version