ಬೆಂಗಳೂರು : 2022-23 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮುಂದುವರೆದು ದಿನಾಂಕ 31:03:2022 ಮಧ್ಯಾಹ್ನ 12 12 ಗಂಟೆಯಿಂದ 12:04:2022 ಸಂಜೆ 5 ಗಂಟೆವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ವಿವರಗಳನ್ನು ಇಲಾಖೆಯ ವೆಬ್ ಸೈಟ್ www.puc.karnataka.gov.in ನಲ್ಲಿ https://dpue-exam.karnataka.gov.in/ NewCollege2223/ ರಿಂದ ಪಡೆಯಬಹುದಾಗಿದೆ.
ಇನ್ನೂ ಈಗಾಗಲೇ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಮಂಜೂರು ಕೋರಿ ಅರ್ಜಿ ಸಲ್ಲಿಸಿರುವ ಖಾಸಗಿ ಶಿಕ್ಷಣ ಸಂಸ್ಥೆ/ಟ್ರಸ್ಟ್ ಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ.
ಚೀನಾದಲ್ಲಿ ‘ಲಾಕ್ಡೌನ್’ : ಫ್ರಾನ್ಸ್ ನಲ್ಲಿ ಹೆಚ್ಚಿದ ಕೋವಿಡ್ ರೋಗಿಗಳ ಸಂಖ್ಯೆ; ಭಾರತದಲ್ಲೂ ಮತ್ತೆ ಕೊರೊನಾ ಢವ ಢವ..!